' BPL' ಕುಟುಂಬದ ಮಹಿಳೆಯರ ಖಾತೆಗೆ 15 ಸಾವಿರ ರೂ. ಜಮಾ

ಆಂಧ್ರಪ್ರದೇಶ ಸರ್ಕಾರ BPL ಕಾರ್ಡ್ ಹೊಂದಿರುವ ಮಹಿಳೆಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಶಾಲೆಗೆ ಹೋಗುವ ಮಕ್ಕಳನ್ನು ಹೊಂದಿರುವ ಮಹಿಳೆಯರಿಗೆ ವಾರ್ಷಿಕ 15 ಸಾವಿರ ರೂ. ನೆರವು ನೀಡುವ ಜಗನ್ ಮೋಹನ್ ರೆಡ್ಡಿ ಮಹತ್ವಾಕಾಂಕ್ಷೆಯ ಅಮ್ಮಾ ಓದಿ ಯೋಜನೆಗೆ ಚಾಲನೆ ನೀಡಲಾಗಿದೆ.
ಮಗು ಶಾಲಾ ಶಿಕ್ಷಣ ಮುಗಿಸುವವರೆಗೂ ರಾಜ್ಯ ಸರ್ಕಾರವು ಶೇಕಡ 75 ರಷ್ಟು ಹಾಜರಾತಿ ಇರುವ ಒಂದರಿಂದ 12ನೇ ತರಗತಿ ಮಕ್ಕಳನ್ನು ಹೊಂದಿದ ಮತ್ತು ಬಿಪಿಎಲ್ ಪಡಿತರ ಚೀಟಿ ಇರುವ ಕುಟುಂಬದ ಮಹಿಳೆಯರ ಖಾತೆಗೆ ವಾರ್ಷಿಕ 15 ಸಾವಿರ ರೂಪಾಯಿ ಜಮಾಮಾಡಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ 43 ಲಕ್ಷ ಮಹಿಳೆಯರಿಗೆ ಇದರ ಪ್ರಯೋಜನ ಸಿಗಲಿದ್ದು, 1 ರಿಂದ 12 ನೇ ತರಗತಿವರೆಗಿನ ಮಕ್ಕಳನ್ನು ಹೊಂದಿರುವ ಮಹಿಳೆಯರು ಈ ಯೋಜನೆಯ ಸೌಲಭ್ಯ ಪಡೆಯಬಹುದು.
Comments