ಪ್ರಿಯಕರನಿಗಾಗಿ ಕೊನೆಕ್ಷಣದಲ್ಲಿ ಮದುವೆ ನಿರಾಕರಿಸಿದ ಯುವತಿ
ಸಾಮಾನ್ಯವಾಗಿ ಪ್ರೇಮಕತೆಯನ್ನು ಆಧರಿಸಿದ ಸಿನಿಮಾಗಳಲ್ಲಿ ನಾನಾ ರೀತಿಯ ಕ್ಲೈಮ್ಯಾಕ್ಸ್ಗಳಿರುತ್ತವೆ. ಆದರೆ, ನಿಜಜೀವನದಲ್ಲಿ ಹಾಗೆಲ್ಲ ಆಗಲು ಸಾಧ್ಯವಾ? ಎಂದು ನೀವು ಯೋಚಿಸಬಹುದು. ಖಂಡಿತ ಸಾಧ್ಯವಿದೆ. ಅದಕ್ಕೆ ಉದಾಹರಣೆಯಾಗಿ ಮಂಡ್ಯದ ಪಾಂಡವಪುರದಲ್ಲಿ ಒಂದು ಘಟನೆ ನಡೆದಿದೆ. ಇಲ್ಲಿ ಭಾನುವಾರ ನಡೆಯಬೇಕಿದ್ದ ಮದುವೆ ಮನೆಯಲ್ಲಿ ಸಿನಿಮೀಯ ಘಟನೆಯೊಂದು ನಡೆದಿದ್ದು, ತಾಳಿ ಕಟ್ಟುವ ವೇಳೆ ತನಗೆ ಈ ಮದುವೆ ಇಷ್ಟವಿಲ್ಲ ಎಂದು ಯುವತಿ ಹೊರನಡೆದಿದ್ದಾಳೆ.
ಯುವತಿ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದು ಬೇರೆ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಲಾಗಿದೆ. ಪಟ್ಟಣದ ಚರ್ಚ್ ನಲ್ಲಿ ಮದುವೆ ಸಮಾರಂಭ ನಡೆದಿದ್ದು, ಎಲ್ಲಾ ಧಾರ್ಮಿಕ ಸಂಪ್ರದಾಯಗಳಲ್ಲಿ ಯುವತಿ ಭಾಗವಹಿಸಿದ್ದಾರೆ. ಮದುವೆಗೆ ಕೊನೆಕ್ಷಣದಲ್ಲಿ ಫಾದರ್ ಹುಡುಗ-ಹುಡುಗಿಯ ಒಪ್ಪಿಗೆ ಇದೆಯೇ ಎಂದು ಕೇಳಿದಾಗ ಯುವತಿ ಒಪ್ಪಿಗೆಯಿಲ್ಲವೆಂದು ತಿಳಿಸಿದ್ದಾಳೆ. ಪ್ರೀತಿಸಿದ ಹುಡುಗನನ್ನು ಮದುವೆಯಾಗುವುದಾಗಿ ಹೇಳಿದ್ದು, ನಂತರ ಈ ವಿಷಯವನ್ನು ಪೊಲೀಸರಿಗೆ ತಿಳಿಸಲಾಯಿತು. ಕೂಡಲೇ ಸ್ಥಳಕ್ಕೆ ಬಂದ ಪಾಂಡವಪುರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
Comments