ಕ್ರಿಸ್ಮಸ್ ಸಂಭ್ರಮಕ್ಕೆ ಗೂಗಲ್ ಡೂಡಲ್ ಗೌರವ

ಹಬ್ಬ ಹಾಗೂ ವಿಶೇಷ ವ್ಯಕ್ತಿಗಳನ್ನು ನೆನಪಿಸುವ ಗೂಗಲ್, ಸಮಸ್ತ ಜನರಿಗೆ ಕ್ರಿಸ್‌ಮಸ್ ಶುಭಾಶಯವನ್ನು ಗೂಗಲ್ ಡೂಡಲ್ ಬಣ್ಣ ಬಣ್ಣದ ಕ್ರಿಸ್‌ಮಸ್ ಟ್ರೀ, ಕ್ರಿಸ್‌ಮಸ್ ಸ್ಯಾಂಟಾದ ಆ್ಯನಿಮೇಟೆಡ್ ಮೂಲಕ ಅದ್ಭುತ ವಿನ್ಯಾಸ ಮತ್ತು ಮಾಹಿತಿ ಪ್ರದರ್ಶಿಸಿದೆ.
ಹ್ಯಾಪಿ ಹಾಲಿಡೇಸ್ ಎಂಬ ಹೆಸರಿನಲ್ಲಿ ಅನಿಮೇಟೆಡ್ ಡೂಡಲ್ ಕ್ರೇಜ್ ಹುಟ್ಟಿಸುತ್ತಿದೆ. ಜಗತ್ತಿನ ವಿವಿಧೆಡೆ ಸಾಂಪ್ರದಾಯಿಕ ಆಚರಣೆ ಬಗ್ಗೆಯೂ ಅಪೂರ್ವ ಮಾಹಿತಿಯನ್ನು ಡೂಡಲ್ ಒಳಗೊಂಡಿದೆ. ಜರುಸಲೇಂನಲ್ಲಿ ಆಚರಣೆಯಾಗುವ ಕ್ರಿಸ್ಮಸ್ ಸಂಭ್ರಮಾಚರಣೆಯನ್ನ ವೀಕ್ಷಕರು ಕಣ್ತುಂಬಿಕೊಳ್ಳಬಹುದಾದ ಅವಕಾಶವನ್ನು ಗೂಗಲ್ ಒದಗಿಸುತ್ತಿದೆ. ವಿದೇಶದಲ್ಲಿ ಕ್ರಿಸ್‌ಮಸ್ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಅಲ್ಲದೆ ಸಾಲು ರಜೆಗಳೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಗೂಗಲ್ ಡೂಡಲ್ ಮೂಲಕ ಸಮಸ್ತ ಜನರಿಗೆ ರಜಾದಿನಗಳ ಶುಭಾಶಯದ ಜತೆ, ಕ್ರಿಸ್‌ಮಸ್ ಶುಭಾಶಯ ಕೋರಿದೆ. ಕ್ರಿಸ್‌ಮಸ್ ದಿನದಂದು ಮಕ್ಕಳು ಸ್ಯಾಂಟ ತಮಗೆ ಉಡುಗೊರೆ ನೀಡುವ ನಿರೀಕ್ಷೆಯಲ್ಲಿರುತ್ತಾರೆ. ವಿದೇಶದಲ್ಲಿ ಈ ದಿನ ಅತಿ ಸಡಗರದಿಂದ ಕೂಡಿರುತ್ತದೆ.
Comments