ಪಡಿತರ ಚೀಟಿ ಹೊಂದಿದವರಿಗೆ ಸಬ್ಸಿಡಿ ದರದಲ್ಲಿ ಮೊಟ್ಟೆ, ಮೀನು, ಮಾಂಸ ವಿತರಣೆ?

ಕೇಂದ್ರ ಸರ್ಕಾರವು ಭಾರತೀಯರನ್ನು ತೀವ್ರವಾಗಿ ಕಾಡುತ್ತಿರುವ ಪೌಷ್ಠಿಕತೆ ನಿವಾರಿಸುವ ನಿಟ್ಟಿನಲ್ಲಿ ಪಡಿತರ ಚೀಟಿದಾರರಿಗೆ ಸಬ್ಸಿಡಿ ದರದಲ್ಲಿ ಮೊಟ್ಟೆ, ಮೀನು, ಮಾಂಸ ವಿತರಣೆ ಮಾಡಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
ಪಡಿತರ ವ್ಯವಸ್ಥೆಯ ಅಡಿಯಲ್ಲಿ ವಿತರಿಸಲಾಗುತ್ತಿರುವ ಗೋಧಿ, ಅಕ್ಕಿ, ಧಾನ್ಯಗಳ ಜೊತೆಗೆ ಅಪೌಷ್ಠಿಕತೆ ನಿವಾರಿಸಲು ಪ್ರೊಟೀನ್ ಯುಕ್ತ ಆಹಾರ ನೀಡುವಂತೆ ಸಲಹೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 2020ರ ಏಪ್ರಿಲ್ ನಿಂದ ಪಡಿತರ ಚೀಟಿದಾರರಿಗೆ ಮೀನು-ಮೊಟ್ಟೆ ಚಿಕನ್ ಮತ್ತು ಮಾಂಸವನ್ನು ಪಡಿತರ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ನೀಡುವ ಕುರಿತು ಹೊಸ ಯೋಜನೆ ರೂಪಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ.
Comments