ಫಾಸ್ಟ್ ಟ್ಯಾಗ್ ಇಲ್ಲದ ವಾಹನಕ್ಕೆ ಇನ್ನುಮುಂದೆ ಸಿಗಲ್ಲ ವಿಮೆ…!

12 Dec 2019 12:06 PM | General
394 Report

ದೇಶಾಧ್ಯಂತ ಡಿಸೆಂಬರ್ 15 ರಿಂದ ಟೋಲ್ ಗಳಲ್ಲಿ ಎಲ್ಲಾ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅನಿವಾರ್ಯವಾಗಲಿದೆ, ಇದೀಗ ಕೇಂದ್ರ ಸರ್ಕಾರವು ವಾಹನ ಸವಾರರಿಗೆ ಮತ್ತೊಂದು ಶಾಕ್ ನೀಡಿದ್ದು, ಪಾಸ್ಟ್ ಟ್ಯಾಗ್ ಹೊಂದಿದ ವಾಹನಗಳಿಗೆ ಮಾತ್ರ ವಿಮೆ ಮಾಡಲಾಗುವುದು ಎಂಬ ನಿಯಮ ಜಾರಿಗೆ ತರುವ ಚಿಂತನೆ ನಡೆಸಿದೆ.

ದೇಶದ ಟೋಲ್ ಬೂತ್ ಗಳಲ್ಲಿ ತಡೆರಹಿತ ಸಂಚಾರ ವ್ಯವಸ್ಥೆ ಜಾರಿಗೆ ತರಲು ಸಾರಿಗೆ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ ಟೋಲ್ ಗಳಲ್ಲಿ ಫಾಸ್ಟ್ ಟ್ಯಾಗ್ ಅನಿವಾರ್ಯ ಮಾಡಿದೆ.ಡಿಸೆಂಬರ್ 15 ರಿಂದ ದೇಶಾಧ್ಯಂತ ಎಲ್ಲಾ ಟೋಲ್ ಗಳಲ್ಲೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ ಹೀಗಾಗಿ ಫಾಸ್ಟ್ ಟ್ಯಾಗ್ ಹೊಂದಿದರೆ ಮಾತ್ರ ವಾಹನಕ್ಕೆ ವಿಮೆ ಎಂಬ ಪಾಲಿಸಿ ಜಾರಿಗೆ ತರುವ ಚಿಂತನೆಯಲ್ಲಿದೆ.
ಫಾಸ್ಟ್‌ ಟ್ಯಾಗನ್ನು ವಿವಿಧ ಬ್ಯಾಂಕ್‌ಗಳು ಮತ್ತು ಐಎಚ್‌ಎಂಪಿಎಲ್‌, ಎನ್‌ಎಚ್‌ಐಎ ಸ್ಥಾಪಿಸಿದ 28,500 ಮಾರಾಟ ಕೇಂದ್ರಗಳು, ಆಯ್ದ ಪೆಟ್ರೋಲ್‌ ಪಂಪ್‌, ಎಲ್ಲ ಸುಂಕ ವಸೂಲಾತಿ ಕೇಂದ್ರಗಳು ಸೇರಿದಂತೆ ನೆಟ್‌ ಬ್ಯಾಂಕಿಂಗ್‌ ಮೂಲಕವೂ ಖರೀದಿಸಬಹುದು. ಹಾಗೇ ಎಲ್ಲ ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್‌ ಟ್ಯಾಗ್‌ ಖರೀದಿಸಬಹುದಾಗಿದೆ.

Edited By

venki swamy

Reported By

venki swamy

Comments