ಜಿಯೋ ಮತ್ತೊಮ್ಮೆ ಹಳೆಯ ಪ್ರಿಪೇಯ್ಡ್ ಯೋಜನೆಯನ್ನು ಪ್ರಕಟಿಸಿದೆ..!
ರಿಲಾಯನ್ಸ್ ಜಿಯೋ ಏರ್‌ಟೆಲ್, ವೊಡಾಫೋನ್ ಹಾಗೂ ಐಡಿಯಾಗೆ ಟಕ್ಕರ್ ಕೊಡಲು ತನ್ನ ಹಳೆಯ ಪ್ರಿಪೇಯ್ಡ್ ಪ್ಲಾನ್ 98, 148 ರುಪಾಯಿಯ ಪ್ರಿಪೇಯ್ಡ್ ಯೋಜನೆಗಳನ್ನು ಮತ್ತೆ ಪರಿಚಯಿಸಿದೆ.ಆದರೆ ಈ ಪ್ಲಾನ್ ಹಿಂದಿನ ಪ್ಲಾನ್ಗಿಂತ ಕಡಿಮೆ ಡೇಟಾ ಹಾಗೂ ಕಡಿಮೆ ಸಿಂಧುತ್ವ ಯೋಜನೆ ಹೊಂದಿದೆ.
ಜಿಯೋ ಪ್ರಕಟಿಸಿರುವ 2 ಹೊಸ ಯೋಜನೆಗಳಲ್ಲಿ ಒಂದಾದ 98 ರುಪಾಯಿ ರೀಚಾರ್ಜ್ ಮಾಡಿದರೆ ಪ್ರತಿದಿನ 2ಜಿಬಿ ಮೊಬೈಲ್ ಡೇಟಾ, 300 ಎಸ್‌ಎಂಎಸ್, ಜಿಯೋ ಅಪ್ಲಿಕೇಶನ್, ಜಿಯೋನಿಂದ ಜಿಯೋಗೆ ಉಚಿತ ಕರೆಗಳು ಸಿಗಲಿದೆ. ಆದರೆ ಐಯುಸಿ ನಿಮಿಷಗಳನ್ನು ಸೇರಿಸಿಲ್ಲ. ಮೊಬೈಲ್ ಡೇಟಾ ತಿಂಗಳ ಯೋಜನೆಯನ್ನು ಮೀರಿದರೆ 64 kbps ವೇಗದಲ್ಲಿ ಇಂಟರ್ನೆಟ್ ಬಳಸಬಹುದು. ಇದರ ವ್ಯಾಲಿಡಿಟಿ 28 ದಿನಗಳು.
ಆದರೆ ಈ ಪ್ಲಾನ್ ಹಿಂದಿನ ಪ್ಲಾನ್ಗಿಂತ ಕಡಿಮೆ ಡೇಟಾ ಹಾಗೂ ಕಡಿಮೆ ಸಿಂಧುತ್ವ ಯೋಜನೆ ಹೊಂದಿದೆ. ಜಿಯೋ 149 ಪ್ರಿಪೇಯ್ಡ್ ಯೋಜನೆಯಲ್ಲಿ ಪ್ರತಿದಿನ 1 ಜಿಬಿ ಡೇಟಾ ಸಿಗಲಿದೆ. ಹಾಗೂ ಜಿಯೋನಿಂದ ಜಿಯೋಗೆ ಉಚಿತ ಕರೆಗಳು, 100 ಎಸ್‌ಎಂಎಸ್, ಜಿಯೋ ಅಪ್ಲಿಕೇಶನ್ ಸೌಲಭ್ಯವಿದ್ದು ಇದರ ವ್ಯಾಲಿಡಿಟಿ 24 ದಿನಗಳು ಮಾತ್ರ.
Comments