ಫೇಸ್‌ಬುಕ್, ವಾಟ್ಸಾಪ್ ಗೆ ಆಧಾರ್ ಲಿಂಕ್ ಬಗ್ಗೆ ದೆಹಲಿ ಹೈಕೋರ್ಟ್ ಮಹತ್ತರವಾದ ತೀರ್ಪು …?

ಫೇಸ್‌ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಆಧಾರ್ ಲಿಂಕ್ ಮಾಡಬೇಕೆಂಬ ಶಾಕಿಂಗ್ ಸುದ್ದಿಯೊಂದು ಇತ್ತೀಚಿಗೆ ವೈರಲ್ ಆಗಿತ್ತು. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್, ವಾಟ್ಸ್ಆಪ್ ಸೇರಿದಂತೆ ಎಲ್ಲಾ ಖಾತೆಗಳಿಗೂ ಆಧಾರ್ ಅಥವಾ ಯಾವುದಾದರೊಂದು ಸರಕಾರಿ ದಾಖಲೆ ಜೊತೆಗೆ ಬೆಸೆದು ಈ ಖಾತೆಗಳಿಗೆ ಒಂದು ಉತ್ತರದಾಯಿತ್ವವನ್ನು ಕೊಡಬೇಕೆಂಬ ಪ್ರಯತ್ನ ನಡೆಯುತ್ತಿತ್ತು. ಆದರೆ ದೆಹಲಿ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.
ಸಾಮಾಜಿಕ ಜಾಲತಾಣಗಳಿಗೆ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ಸಾಮಾಜಿಕ ಜಾಲತಾಣದ ಜೊತೆ ಆಧಾರ್, ಪಾನ್ ಲಿಂಕ್ ತಿರಸ್ಕರಿಸಿದೆ. ಸಾಮಾಜಿಕ ಜಾಲತಾಣದ ಜೊತೆ ಇವುಗಳನ್ನು ಲಿಂಕ್ ಮಾಡಿದ್ರೆ" ಯಾವುದೇ ಕಾರಣವಿಲ್ಲದೆ ನಮ್ಮ ದೇಶದ ಡೇಟಾಗಳು ವಿದೇಶಿಗರ ಕೈಸೇರಲಿದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದೆ.
Comments