ಏರ್ಟೆಲ್ ನೂತನ ದರಗಳ ಪಟ್ಟಿ ಯಾವುದಕ್ಕೆ ಎಷ್ಟು ಎಕ್ಸ್ಟ್ರಾ ಕೊಡ್ಬೇಕು?

03 Dec 2019 11:37 AM | General
460 Report

ಭಾರತೀಯ ಟೆಲಿಕಾಂ ಕಂಪನಿಗಳು ವ್ಯವಹಾರದಲ್ಲಿ ನಷ್ಟವನ್ನು ಸರಿತೂಗಿಸಲು ದರ ಏರಿಕೆಯ ಮೊರೆ ಹೋಗಿವೆ. ಏರ್ಟೆಲ್ ತನ್ನ ವಿವಿಧ ಪ್ಲಾನ್ಗಳಿಗೆ ದಿನಕ್ಕೆ 50 ಪೈಸೆಯಿಂದ 2.85 ರೂ ವರೆಗೆ ದರವನ್ನು ಹೆಚ್ಚಿಸಿದ.

28 ದಿನಗಳ ಅವಧಿಗೆ ₹130 ಮೌಲ್ಯದ ಟಾಕ್‌ಟೈಮ್, 200MB ಡೇಟಾ, 300 SMS ನೀಡುತ್ತಿದ್ದ ₹65 ಪ್ಲಾನ್ ದರ ₹79 ಆಗಲಿದೆ. ಇದರಲ್ಲಿ ₹63.95 ಟಾಕ್‌ಟೈಮ್ ಸಿಗಲಿದೆ.
28 ದಿನಗಳ ಅವಧಿಗೆ ₹26.66 ಟಾಕ್ಟೈಮ್, 100MB ಡೇಟಾವನ್ನು ಒಳಗೊಂಡಿದ್ದ ₹35ರ ಪ್ಲಾನ್ ದರ ಹೆಚ್ಚಾಗಿದೆ. ಇದರ ಬೆಲೆ ಇನ್ಮುಂದೆ ₹49 ಆಗಿದೆ. ₹38.52 ಟಾಕ್ ಟೈಮ್ ಸಿಗುತ್ತೆ.
ಅನಿಯಮಿತ ಕಾಲಿಂಗ್, 100SMS, 1.5GB ಡೇಟಾ ಒಳಗೊಂಡಿದ್ದ ₹199 ಪ್ಲಾನ್‌ಗೆ ಬಳಕೆದಾರರು ಇನ್ಮುಂದೆ ₹248 ಕೊಡಬೇಕು.
ಅತಿ ಹೆಚ್ಚು ಜನಪ್ರಿಯವಾಗಿರುವ ₹249 ಪ್ಲಾನ್‌ಗೆ ಗ್ರಾಹಕರು ಇನ್ಮುಂದೆ ₹298 ಪಾವತಿಸಬೇಕು. ಅನ್ಲಿಮಿಟೆಡ್ ಕಾಲಿಂಗ್, 100 SMS, ಪ್ರತಿದಿನ 2GB ಡೇಟಾ ನೀಡಲಾಗುತ್ತದೆ.

 

Edited By

venki swamy

Reported By

venki swamy

Comments