ಚಪ್ಪಲಿ ಹಾಕ್ಕೊಂಡು ಗಾಡಿ ಓಡ್ಸಿದ್ರೂ ದಂಡ ಬೀಳೋದು ಗ್ಯಾರಂಟಿ..!!

11 Sep 2019 11:22 AM | General
725 Report

ಈಗಾಗಲೇ ಹೊಸ ಹೊಸ ಟ್ರಾಫಿಕ್ ನಿಯಮಗಳಿಗೆ ಸವಾರರು ಬೇಸತ್ತು ಹೋಗಿದ್ದಾರೆ. ದುಬಾರಿ ದಂಡಕ್ಕೆ ಬೇಸತ್ತ ಜನರಿಗೆ ಮತ್ತೊಂದು ಶಾಕ್ ಕಾದಿದೆ. ಇನ್ನು ಮುಂದೆ ಚಪ್ಪಲಿ ಹಾಕಿಕೊಂಡು ವಾಹನ ಚಲಾಯಿಸಿದರೂ ಕೂಡ ಅದಕ್ಕೂ ದಂಡ ಗ್ಯಾರೆಂಟಿ ಎನ್ನಲಾಗುತ್ತಿದೆ. ಈಗಾಗಲೇ ಜಾರಿಗೆ ಬಂದಿರುವ ಹೊಸ ಹೊಸ ಟ್ರಾಫಿಕ್ ನಿಯಮಗಳಿಂದ ವಾಹನ ಸವಾರರು ಬೇಸತ್ತು ಬಿಟ್ಟಿದ್ದಾರೆ.  ಇದೇ ಹಿನ್ನಲೆಯಲ್ಲಿ ವಾಹನ ಸವಾರರಿಗೆ ಮತ್ತೊಂದು ಹೊಸ ನಿಯಮ ಜಾರಿಗೆ ಬಂದಿದೆ. ಸವಾರರು ಸ್ಲಿಪ್ಪರ್, ಹವಾಯಿ ಚಪ್ಪಲ್ ಹಾಕಿಕೊಂಡು ಗೇರ್ ಹೊಂದಿರುವ ದ್ವಿಚಕ್ರ ವಾಹನ ಓಡಿಸುವಂತಿಲ್ಲ.

ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ 1,000 ರೂ ದಂಡ ತೆರಬೇಕಾಗಿರುತ್ತದೆ. ಈ ತಪ್ಪು ಮರುಕಳಿಸಿದರೆ ದಂಡದ ಜೊತೆಗೆ 15 ದಿನಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಸ್ಲಿಪ್ಪರ್, ಹವಾಯಿ ಚಪ್ಪಲಿ ಹಾಕಿದರೆ ದ್ವಿಚಕ್ರ ವಾಹನದ ಗೇರ್ ಬದಲಾಯಿಸಲು, , ಪಾರ್ಕಿಂಗ್‍ನಿಂದ ವಾಹನ ತೆಗೆಯಲು ಸಮಸ್ಯೆ ಆಗಲಿದೆ. ಜೊತೆಗೆ ಅಪಘಾತದವಾದಾಗ ಕಾಲಿಗೆ ಗಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಸವಾರರು ಶೂ ಧರಿಸಿದರೆ ಒಳ್ಳೆಯದು ಎಂಬುದು ನಿಯಮದ ಉದ್ದೇಶವಾಗಿದೆ. 1988ರ ಮೋಟಾರು ವಾಹನ ಕಾಯ್ದೆಯಲ್ಲೇ ಇದನ್ನು ಉಲ್ಲೇಖಿಸಲಾಗಿದೆ. ಒಟ್ಟಿನಲ್ಲಿ ಗಾಡಿಯಲ್ಲಿ ಎಲ್ಲಾದರೂ ಹೋಗಬೇಕು ಎಂದರೂ ಕೂಡ ಸಾವಿರ ಸಲ ಯೋಚನೆ ಮಾಡಬೇಕುವ ಪರಿಸ್ಥಿತಿ ಎದುರಾಗಿದೆ. ಗಾಡಿಯ ಮೊತ್ತಕ್ಕಿಂತ ದಂಡ ಕಟ್ಟುವ ಮೊತ್ತವೇ ಹೆಚ್ಚಾಗಿದೆ. ಹಾಗಾಗಿ ಎಲ್ಲಾ ಡ್ಯಾಕುಮೆಂಟ್ಸ್ ಜೊತೆಗೆ ಹೆಲ್ಮೆಟ್ ಇದ್ದರೆ ಮಾತ್ರ ರಸ್ತೆಗಳಿಯಿರಿ.

Edited By

Manjula M

Reported By

Manjula M

Comments