ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೆಚ್.ಡಿ. ಕುಮಾರಸ್ವಾಮಿ..!!!

ಮೊನ್ನೆ ಮೊನ್ನೆಯಷ್ಟೆ ಹೆಚ್ ಡಿ ಕುಮಾರಸ್ವಾಮಿಯವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರೇ ಈಗಾಗಲೇ ಕುಮಾರಸ್ವಾಮಿಯವರಿಗೆ ಮದುವೆಯಾಗಿದೆ ಇದೀಗ ಮತ್ತೊಂದು ಮದುವೆಯಾದ್ರಾ ಎಂಬ ಪ್ರಶ್ನೆ ಹುಟ್ಟುವುದು ಕಾಮನ್.. ಆದರೆ ಮದುವೆಯಾಗಿದ್ದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅಲ್ಲ ಬದಲಿಗೆ ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಜೋಡಿಕಟ್ಟೆ ಹಿರೇಹಳ್ಳಿಯ ಜೆಡಿಎಸ್ ಕಾರ್ಯಕರ್ತ ಧರ್ಮೇಗೌಡ ಮತ್ತು ಧನಲಕ್ಷ್ಮಿ ದಂಪತಿಯ ಪುತ್ರ ಹೆಚ್.ಡಿ. ಕುಮಾರಸ್ವಾಮಿ..
ಹಾಸನದ ಹೆಚ್.ಡಿ. ಕುಮಾರಸ್ವಾಮಿ ಮತ್ತು ಮೋಹನಾಕ್ಷಿ ಸೆಪ್ಟೆಂಬರ್ 8 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಜೋಡಿಕಟ್ಟೆ ಹಿರೇಹಳ್ಳಿಯ ಜೆಡಿಎಸ್ ಕಾರ್ಯಕರ್ತ ಧರ್ಮೇಗೌಡ ಮತ್ತು ಧನಲಕ್ಷ್ಮಿ ದಂಪತಿಯ ಪುತ್ರ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮೋಹನಾಕ್ಷಿ ಅವರ ವಿವಾಹ ಹಾಸನದ ಗುರುರಾಜ ಕಲ್ಯಾಣ ಮಂಟಪದಲ್ಲಿ ನೆರವೇರಿದೆ. ಅಂದ ಹಾಗೆ, ಮದುವೆಯ ಆಹ್ವಾನ ಪತ್ರಿಕೆ ಮತ್ತು ಸ್ವಾಗತ ಫಲಕದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಮದುವೆಯ ಆಹ್ವಾನ ಪತ್ರಿಕೆ ಮತ್ತು ಸ್ವಾಗತ ಫಲಕದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹೆಸರನ್ನು ನೋಡಿದವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ನೆನಪಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಎಂದ ಕ್ಷಣ ಒಂದು ಕ್ಷಣ ನಮಗೆ ನೆನಪಾಗುವುದು ಮಾಜಿ ಮುಖ್ಯಮಂತ್ರಿಗಳು. ಆದರೆ ಇದೀಗ ಅದೇ ಹೆಸರಿನ ಮತ್ತೊಬ್ಬ ವ್ಯಕ್ತಿಯ ಮದುವೆಯ ಸುದ್ದಿ ಸಖತ್ ವೈರಲ್ ಆಗಿದೆ.
Comments