ಕೊಪ್ಪಳದಲ್ಲೊಂದು ಅಮಾನವೀಯ ಘಟನೆ..!! ಮಾನವೀಯತೆ ಮರೆತ ಕೆಎಸ್‍ಆರ್'ಟಿಸಿ ಡಿಪೋ ಅಧಿಕಾರಿಗಳು..

ಕೊಪ್ಪಳದ ಕೆಎಸ್’ಆರ್’ಟಿಸಿ ಡಿಪೋದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಗಳ ಸಾವಿನ ಸುದ್ದಿಯನ್ನು ತಂದೆಗೆ ತಿಳಿಸದೆ ಡಿಪೋ ಅಧಿಕಾರಿಗಳು ಅಮಾನವೀಯತೆಯನ್ನು ಮೆರೆದಿದ್ದಾರೆ..ಅಂತ್ಯಕ್ರಿಯೆ ಆದ ಮೇಲಾದರೂ ಮನೆಗೆ ತೆರಳಲು ರಜಾ ಕೊಡಿ ಎಂದು ಬೇಡಿಕೊಂಡರು ಹಿರಿಯ ಅಧಿಕಾರಿಗಳು ಕರುಣೆ ತೋರದೆ ನಿರ್ಧಯಿಗಳಾಗಿ ವರ್ತಿಸಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ-ಕೊಲ್ಲಾಪುರ ಮಾರ್ಗದ ಕೆಎಸ್‍ಆರ್‍ಟಿಸಿ ಬಸ್‍ನ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿರುವ ಮಂಜುನಾಥ್ ಅವರ ಪುತ್ರಿ ಕವಿತಾ ಬುಧವಾರ ಮುಂಜಾನೆ 10 ಗಂಟೆ ಸುಮಾರಿಗೆ ಮೃತಪಟ್ಟಿದ್ದಾಳೆ. ಕುಟುಂಬದ ಸದಸ್ಯರು ಮಂಜುನಾಥ್ ಅವರಿಗೆ ಮಗಳು ಮೃತ ಪಟ್ಟಿರುವ ವಿಷಯ ತಿಳಿಸಲು ಮೊಬೈಲ್‍ಗೆ ಕರೆ ಮಾಡಿದ್ದಾರೆ. ಇತ್ತೀಚೆಗೆ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಕರ್ತವ್ಯ ನಿರ್ವಹಣೆ ವೇಳೆ ಚಾಲಕರು ಮತ್ತು ನಿರ್ವಾಹಕರು ಮೊಬೈಲ್ ಬಳಸಬಾರದು ಎಂದು ಆದೇಶ ಹೊರಡಿಸಿದೆ. ಇದೇ ಕಾರಣಕ್ಕಾಗಿ ಮಂಜುನಾಥ್ ಮೊಬೈಲ್ ಅನ್ನು ಡಿಪೋದಲ್ಲಿಯೇ ಬಿಟ್ಟು ಹೋಗಿದ್ದರು. ಸ್ವೀಕರಿಸಿದ ಡಿಪೋದ ಅಧಿಕಾರಿಗಳು ಮಂಜುನಾಥ್ ಅವರಿಗೆ ವಿಷಯ ಮುಟ್ಟಿಸಿಲ್ಲ. ಕೆಲಸ ಮುಗಿ ಸಂಜೆ ಡಿಪೋಗೆ ವಾಪಸಾದಾಗ ವಿಷಯ ತಿಳಿದಿದೆ. ತಕ್ಷಣವೇ ಮನೆಗೆ ಕರೆ ಮಾಡಿದಾಗ ಅಂತ್ಯಕ್ರಿಯೆ ಮುಗಿಸಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಇದರಿಂದ ಬೇಸರಗೊಂಡ ಮಂಜುನಾಥ್ ಒಂದು ರಜೆ ಕೇಳಿದರೂ ನೀಡದೆ ಅಮಾನವೀಯತೆ ಮೆರೆದಿದ್ದಾರೆ.
Comments