ಗಂಡನ ಅತೀಯಾದ ಪ್ರೀತಿ ಸಹಿಸಲಾರದೇ ಹೆಂಡತಿ ಮಾಡಿದ್ದೇನು ಗೊತ್ತಾ..?

23 Aug 2019 2:03 PM | General
737 Report

ಮದುವೆಯಾದ ಪ್ರತಿಯೊಂದು ಹೆಣ್ಣು ಬಯಸೋದು ತನ್ನ ಗಂಡ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು ಹಾಗೇ  ಜಾಸ್ತಿ ಪ್ರೀತಿ ಮಾಡಬೇಕು ಎಂದು..  ಆದರೆ  ಗಂಡ ಪ್ರೀತಿಯಲ್ಲಿ ಕೊರತೆ ಮಾಡ್ತಿದ್ದಾನೆ ಎಂದು ಗೊತ್ತಾದ ಕ್ಷಣ ಹೆಂಡತಿ ಕೋಪ ಮಾಡಿಕೊಳ್ಳುವುದು ಕಾಮನ್.. ಆಗೇಯೇ ಸ್ವಲ್ಪ ಅತೀರೇಕಕ್ಕೆ ಹೋದರೆ ಹಿಂದು ಮುಂದೂ ನೋಡದೆ ವಿಚ್ಚೇದನ ಪಡೆಯಲು ಮುಂದಾಗಿ ಬಿಡುತ್ತಾರೆ.. 

ಆದರೆ ಇಲ್ಲೊಂದು ಅಪರೂಪದ ಘಟನೆ ನಡೆದಿದೆ.. ಗಂಡನ ಹಿಂಸೆ ತಾಳಲಾರದೆ ಡೈವರ್ಸ್ ಕೇಳುವ ಮಹಿಳೆಯರ ಬಗ್ಗೆ ಸಾಮಾನ್ಯವಾಗಿ ಕೇಳುತ್ತಿರುತ್ತೇವೆ. ಆದರೆ ಅರಬ್​ ಸಂಯುಕ್ತ ಸಂಸ್ಥಾನದಲ್ಲಿ ಮಹಿಳೆಯೊಬ್ಬಳು ಅತಿಯಾಗಿ ಪ್ರೀತಿಸುವ ಗಂಡನಿಂದ ಮುಕ್ತಿಬೇಕು ಎಂದು ಕೋರ್ಟ್ ಮೆಟ್ಟಿಲೇರಿದ ಘಟನೆ ನಡೆದಿದೆ. ಒಂದು ವರ್ಷದ ಹಿಂದಷ್ಟೆ ಮದುವೆಯಾದ ಈ ಜೋಡಿ ಸುಖವಾಗಿ ಸಂಸಾರ ನಡೆಸುತ್ತಿದ್ದು, ಪತಿ ತನ್ನ ಪತ್ನಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ. ಆಕೆ ಕಷ್ಟಪಡಬಾರದೆಂದು ಆಕೆಯನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತದ್ದ. ಇದು ಪತ್ನಿಗೆ ಅತಿರೇಕ ವರ್ತನೆ ಎನಿಸಿದ್ದು, ಇಂತಹ ಪತಿಯಿಂದ ನನಗೆ ವಿಚ್ಛೇದನ ನೀಡಿ ಎಂದು ಅರಬ್​ ಸಂಯುಕ್ತ ಸಂಸ್ಥಾನದ ಶಾರ್ಜಾ ಕೋರ್ಟ್​ ಮೊರೆ ಹೋಗಿದ್ದಾಳೆ ಎಂದು ಅಲ್ಲಿನ ಪತ್ರಿಕೆ ವರದಿ ಮಾಡಿದೆ.  ಒಟ್ಟಿನಲ್ಲಿ ಗಂಡ ಆದವರು ಹೆಂಡತಿಯರನ್ನು ಹೇಗೆ ನೋಡಿಕೊಂಡರೂ ಕೂಡ ಕಷ್ಟವಾಗಿ ಬಿಟ್ಟಿದೆ ಅನಿಸುತ್ತಿದೆ.. ಗಂಡ ಚೆನ್ನಾಗಿ ನೋಡಿಕೊಳ್ಳಲ್ಲ ಎಂದು ಗೋಳಾಡುವವರ ಈ ಮಧ್ಯೆ ಈ ಜೋಡಿ ಒಂಥರಾ ವಿಭಿನ್ನ ಅನಿಸದೇ ಇರದು. ಆದರೆ ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಮದುವೆಯಾದ ಹೊಸದರಲ್ಲಿ ಇಂತಹ ತಪ್ಪುಗಳು ಆಗುವುದು ಸಹಜ ಇದನ್ನು ನೀವೆ ಬಗೆಹರಿಸಿಕೊಳ್ಳಿ ಎಂದಿದೆ.

Edited By

Manjula M

Reported By

Manjula M

Comments