ಸಿನಿಮಾಗೆ ಗುಡ್ ಬೈ ಹೇಳಿದ ನಿಖಿಲ್ ..!? ಕಾರಣ ಏನ್ ಗೊತ್ತಾ..?

ರಾಜ್ಯ ರಾಜಕೀಯದಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ಮೇಲೆ ಸಾಕಷ್ಟು ಬದಲಾವಣೆಗಳು ಕಾಣಿಸುತ್ತಿವೆ.. ಅದರಲ್ಲೂ ಮಂಡ್ಯ ಅಖಾಡ ಸದ್ದು ಮಾಡಿದಷ್ಟು, ಬೇರೆ ಯಾವ ಅಖಾಡವು ಸದ್ದು ಮಾಡಿಲ್ಲ… ಅದರಲ್ಲೂ ಮಂಡ್ಯ ಅಖಾಡದಲ್ಲಿ ನಿಖಿಲ್ ಮತ್ತು ಸುಮಲತಾ ನಡುವೆ ಸಿಕ್ಕಾಪಟ್ಟೆ ಪೈಪೋಟಿ ಏರ್ಪಟ್ಟಿತ್ತು.. ಅದರಲ್ಲಿ ಸುಮಲತಾ ಮಂಡ್ತ ಜನರ ಮನಸ್ಸನ್ನು ಗೆದ್ದು ಮಂಡ್ಯ ಅಖಾಡದಿಂದ ವಿಜಯಶಾಲಿಯಾಗಿ ಬಂದರು.. ಇದರ ನಡುವೆ ನಿಖಿಲ್ ಬೇಸರಗೊಂಡಿದ್ದಂತು ಸುಳ್ಳಲ್ಲ… ಆದರೂ ಕೂಡ ಸಮಾಜಮುಖಿ ಕೆಲಸಗಳನ್ನು ಮಾಡುತ್ತಲೇ ಇದ್ದಾರೆ.
ಸದ್ಯ ನಿಖಿಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಆದರೆ ನಿಖಿಲ್ ಗೆ ಈ ಸಿನಿಮಾ ಎಲ್ಲಾ ಬೇಡ ಎಂದಿದ್ದಾರಂತೆ ದೇವೆಗೌಡರು.. ಅದಕ್ಕೆ ನಿಖಿಲ್ ಕೂಡ ಡಬ್ಬಿಂಗ್ ಮುಗಿಸುವುದಾಗಿ ಮನವಿ ಮಾಡಿದ್ದಾನೆ ಎಂದು ಜೆಡಿಎಸ್ ವರಿಷ್ಟ ಹೆಚ್ ಡಿ ದೇವೇಗೌಡ ತಿಳಿಸಿದರು.. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರಜ್ವಲ್ ರೇವಣ್ಣ ಸಂಸದನಾಗಿದ್ದಾನೆ. ಅವನನ್ನು ರಾಜ್ಯ ರಾಜಕಾರಣಕ್ಕೆ ತರುವ ಬಗ್ಗೆ ಚರ್ಚೆ ಮಾಡಿಲ್ಲ. ಪ್ರಜ್ವಲ್ ಹಾಸನ ಮಾತ್ರವಲ್ಲ ರಾಜ್ಯದ ಎಲ್ಲಾ ಜಿಲ್ಲೆಯ ಬಗ್ಗೆ ಚರ್ಚೆ ಮಾಡುತ್ತಿದ್ದಾನೆ. ನಿಖಿಲ್ ಕುಮಾರಸ್ವಾಮಿಗೆ ಯುವ ಜೆಡಿಎಸ್ ಜವಾಬ್ದಾರಿ ನೀಡಿದ್ದೇವೆ, ಅದಕ್ಕೆ ಸಂಬಂಧಿಸಿದ ಕೆಲಸ ಮಾತ್ರ ಮಾಡುವಂತೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.. ಸದ್ಯ ದೋಸ್ತಿ ಸರ್ಕಾರದ ಅತೃಪ್ತ ಶಾಸಕರು ರಾಜೀನಾಮೆ ನೀಡಿ ಅನರ್ಹರಾಗಿದ್ದಾರೆ.. ಸದ್ಯ ಅನರ್ಹ ಶಾಸಕರ ಪ್ರಕರಣ ಸುಪ್ರೀ ಕೋರ್ಟ್ ಅಂಗಳದಲ್ಲಿದೆ. ತೀರ್ಪು ಬಂದ ಬಳಿಕ ನಡೆಯವ 17 ಕ್ಷೇತ್ರಗಳ ಉಪ ಚುನಾವಣೆಗೆ ಮೈತ್ರಿ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಜೊತೆ ಮಾತನಾಡಿ ತೀರ್ಮಾನ ಮಾಡುತ್ತೇವೆ ಎಂದರು.. ಒಟ್ಟಿನಲ್ಲಿ ದೋಸ್ತಿ ಸರ್ಕಾರದ ಪತನಕ್ಕೆ ಅತೃಪ್ತ ಶಾಸಕರೇ ಕಾರಣ ಎಂಬುದು ರಾಜಕೀಯ ವಲಯದ ಚರ್ಚೆಯ ವಿಷಯವಾಗಿದೆ..
Comments