ವಿ ಜಿ ಸಿದ್ಧಾರ್ಥ್ ಸಾವಿಗೆ ಕಾರಣ ಇದೆಯಂತೆ..!?

CCD café coffee day ಸಂಸ್ಥೆಯ ಮಾಲೀಕರಾದ ವಿ ಜಿ ಸಿದ್ಧಾರ್ಥ್ ಅವರ ಸಾವು ಯಾರು ಕೂಡ ಊಹಿಸಿರದ ರೀತಿಯಲ್ಲಿ ನಡೆದುಹೋಗಿದೆ.. ಮಂಗಳೂರಿನ ನೇತ್ರಾವತಿ ನದಿಯಲ್ಲಿ ಸಿದ್ದಾರ್ಥ್ ಅವರ ಮೃತ ದೇಹ ಸಿಕ್ಕಿದ್ದು ಅದರ ಹಿನ್ನಲೆಯಲ್ಲಿಯೇ ಅವರ ಸಾವಿಗೆ ಹೊಸ ಹೊಸ ತಿರುವುಗಳು ಸಿಗುತ್ತಿವೆ.. ಸಿದ್ದಾರ್ಥ್ ಅವರ ಅಕಾಲಿಕ ಸಾವನ್ನು ಇನ್ನೂ ಕೂಡ ಯಾರು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.. ಇದೀಗ ಸಿದ್ಧಾರ್ಥ್ ಅವರ ಸಾವಿಗೆ ಮುಂಬೈ ಮೂಲದ ಫೈನಾನ್ಸ್ ಕಂಪನಿಯ ಕಿರುಕುಳವೇ ಕಾರಣ ಎನ್ನಲಾಗುತ್ತಿದೆ.
ಹೌದು.. ನಾನಾ ಕಾರಣಗಳಿಂದ ಸಿದ್ದಾರ್ಥ್ ಈ ಫೈನಾನ್ಸ್ ಸಂಸ್ಛೆಯಿಂದ ಸಾಲ ಪಡೆದಿದ್ದರು.. ಆದರೆ ಇದನ್ನು ತೀರಿಸಲಾಗದೇ ಮತ್ತು ಆ ಸಂಸ್ಥೆಯ ಏಜೆಂಟರುಗಳ ಕಿರುಕುಳದಿಂದ ಬೇಸತ್ತ ಸಿದ್ಧಾರ್ಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯದ ಬಗ್ಗೆ ಮಾಧ್ಯಮವೊಂದು ವರದಿ ಮಾಡಿದ್ದು, ವರದಿಯಲ್ಲಿರುವಂತೆ ಸಿದ್ಧಾರ್ಥ್ ಮುಂಬೈ ಮೂಲದ ಫೈನಾನ್ಸ್ ಸಂಸ್ಥೆಯಿಂದ ಸುಮಾರು 7500 ಕೋಟಿ ರೂಗಳನ್ನು ತಿಂಗಳ ಬಡ್ಡಿಆಧಾರದ ಮೇಲೆ ಸಾಲ ಪಡೆದಿದ್ದರು. ಈ ಸಾಲ ವಸೂಲಾತಿಗಾಗಿ ಸಿದ್ಧಾರ್ಥ್ ಅವರನ್ನು ಆ ಫೈನಾನ್ಸ್ ಸಂಸ್ಥೆ ಪೀಡಿಸುತ್ತಿತ್ತು. ಇದರಿಂದ ಬೇಸತ್ತ ಸಿದ್ಧಾರ್ಥ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಸಿದ್ಧಾರ್ಥ್ ಅತೀವ ಒತ್ತಡದಿಂದ ಆತ್ಮಹತ್ಯೆಗೆ ಮುಂದಾಗಿರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ. ಒಟ್ಟಾರೆಯಾಗಿ ಸಾಲದ ಸುಳಿಗೆ ಸಿದ್ದಾರ್ಥ್ ಬಲಿಯಾಗಿದ್ದಾರ ಅಥವಾ ಬೇರೆ ಕಾರಣವಿದೆಯೋ ಎಂಬುದು ಮಾತ್ರ ನಿಗೂಢ.. ಸಿದ್ದಾರ್ಥ್ ಅವರ ಸಾವಿಗೆ ಎಲ್ಲ ಕ್ಷೇತ್ರದವರು ಕೂಡ ಕಂಬನಿ ಮಿಡಿದಿದ್ದಾರೆ..
Comments