ರೈತ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್..
ಈಗಾಗಲೇ ರಾಜ್ಯ ಸರ್ಕಾರವು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.. ಎಲ್ಲರೂ ಕೂಡ ಅದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಹೆಣ್ಣು ಮಕ್ಕಳುಗೆ ನಿರುದ್ಯೋಗಿಗಳಿಗೆ, ರಸ್ತೆ ಬದಿ ವ್ಯಾಪಾರಗಳಿಗೆ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.. ಇದೀಗ ರೈತ ಮಹಿಳೆಯರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದೆ. ರೈತ ಮಹಿಳೆಗೆ ಶೇಕಡ 3 ರಷ್ಟು ಬಡ್ಡಿದರದಲ್ಲಿ ಗೃಹ ಲಕ್ಷ್ಮೀ ಬೆಳೆ ಸಾಲ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯು ಜು. 10 ರಿಂದಲೇ ರಾಜ್ಯದಲ್ಲಿ ಅನುಷ್ಠಾನಗೊಂಡಿದೆ.
ಗೋಲ್ಡ್ ಜ್ಯುವೆಲ್ಲರಿ ಮೇಲೆ ಶೇ. 3ರ ಬಡ್ಡಿದರದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಸಾಲ ಸೌಲಭ್ಯ ದೊರೆಯಲಿದೆ. ಭದ್ರತೆ ವ್ಯವಸ್ಥೆ, ವಿಮೆ ಸೌಲಭ್ಯ ಹೊಂದಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಮತ್ತು ಡಿಸಿಸಿ ಬ್ಯಾಂಕ್ ಮೂಲಕ ಪ್ರಸಕ್ತ ವರ್ಷವೇ ಈ ಗೃಹಲಕ್ಷ್ಮಿ ಯೋಜನೆ ಜಾರಿಗೊಳಿಸಲಾಗಿದೆ. ಗರಿಷ್ಠ 5 ಎಕೆರೆ ಭೂ ಹಿಡುವಳಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಗೃಹಲಕ್ಷ್ಮಿ ಯೋಜನೆಯು ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ. ಸಾಲವನ್ನು ಅಲ್ಪಾವಧಿ ಕೃಷಿ ಉದ್ದೇಶಕ್ಕೆ ಮಾತ್ರ ಕೊಡಲಾಗುತ್ತದೆ .ಬ್ಯಾಂಕ್ ಅಥವಾ ಸಂಘಗಳು ಈ ಯೋಜನೆಯಡಿ ನೀಡುವ ಆಭರಣ ಸಾಲಗಳಿಗೆ ಶೇ. 3ರ ಬಡ್ಡಿ ಅನ್ವಯವಾಗುತ್ತದೆ. ಬೆಲೆ ಸಾಲ ಮತ್ತು ಚಿನ್ನಭರಣ ಸಾಲದ ಮೊತ್ತ 3 ಲಕ್ಷ ರೂ.ಗೆ ಮೀರುವಂತಿಲ್ಲ. 3 ಲಕ್ಷ ಮೀರಿದ ಸಂಪೂರ್ಣ ಬಡ್ಡಿದರ ಅನ್ವಯವಾಗಲಿದೆ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಈ ಯೋಜನೆಯನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ..
Comments