ಗೂಗಲ್ ಪೇ ನಲ್ಲಿ ಹಣ ಕಳಿಸ್ತಿದ್ದೀರಾ..!! ಹಾಗಾದ್ರೆ ಇದನ್ನೊಮ್ಮೆ ಓದಿ..!!!

ಇತ್ತಿಚಿಗೆ ಹಣ ವರ್ಗಾವಣೆ ಮಾಡುವುದು ಮೊದಲಿನಷ್ಟು ಕಷ್ಟ ಅಲ್ಲ.. ಮೊದಲಾದರೂ ಬ್ಯಾಂಕ್ ಗಳಿಗೆ ಹೋಗಿ ಸರತಿ ಸಾಲಿನಲ್ಲಿ ನಿಂತು ಹಣ ತೆಗೆದುಕೊಳ್ಳುವುದು ಅಥವಾ ಮತ್ತೊಂದು ಮಾಡಬೇಕಿತ್ತು. ಅದಷ್ಟೆ ಅಲ್ಲದೆ ಮೊಬೈಲ್ ರೀಚಾರ್ಚ್ ಮಾಡುವುದು ಕರೆಂಟ್ ಬಿಲ್ ಕಟ್ಟುವುದು ಎಲ್ಲವೂ ಕೂಡ ಸ್ವಲ್ಪ ಕಷ್ಟವೇ ಆಗಿತ್ತು.. ಆದರೆ ಇದೀಗ ಎಲ್ಲವೂ ಕೂಡ ಕ್ಷಣಾರ್ಧದಲ್ಲಿಯೇ ಆಗಿ ಬಿಡುತ್ತದೆ.. ಕೈಯಲ್ಲೊಂದು ಆಂಡ್ರ್ಯಾಯ್ಡ್ ಪೋನ್ ಇದ್ರೆ ಸಾಕು… ಎಲ್ಲವೂ ಕೂತಲ್ಲೆ ಆಗಿ ಬಿಡುತ್ತದೆ.. ಆ ರೀತಿಯ ಆ್ಯಪ್ ಗಳು ಬಿಡುಗಡೆಯಾಗಿವೆ, ಆ ರೀತಿಯ ಆ್ಯಪ್ ಗಳಲ್ಲಿ ಗೂಗಲ್ ಪೇ ಕೂಡ ಒಂದು.. ಆದರೆ ಈ ರೀತಿಯ ಆ್ಯಪ್ ಗಳಲ್ಲಿ ಹಣ ವರ್ಗಾವಣೆ ಮಾಡುವ ಮೊದಲು ಯೋಚಿಸಬೇಕಾಗುತ್ತದೆ.
ಗೂಗಲ್ ಪೇ ಮುಖಾಂತರ ಹಣ ವರ್ಗಾವಣೆ ವೇಳೆ ಅಪರಿಚಿತನೊಂದಿಗೆ ವ್ಯವಹರಿಸಿ ಹಣ ಕಳೆದುಕೊಂಡ ಪ್ರಸಂಗ ಶ್ರೀರಾಮನಗರದಲ್ಲಿ ನಡೆದಿದೆ. ಶ್ರೀ ರಾಮ ಬಡಾವಣೆಯ ಮುರಳಿ ಬಾಬು ಎನ್ನುವ ವ್ಯಕ್ತಿ ಗೂಗಲ್ ಪೇ ಮುಖಾಂತರ ಹಣ ವರ್ಗಾವಣೆ ಮಾಡಬೇಕಾಗಿದ್ದು , ಈ ಸಂದರ್ಭದಲ್ಲಿ ತನ್ನ ಮೊಬೈಲ್ ಸರಿ ಇಲ್ಲದ ಕಾರಣ ಟೋಲ್ ಫ್ರೀ ನಂಬರ್‍ಗೆ ಕರೆ ಮಾಡಿದ್ದರು. ಈ ವೇಳೆ ಟೋಲ್ ಫ್ರೀ ಸಂಪರ್ಕದ ವೇಳೆ ನೀಡಿದ ನಂಬರ್ ಅನ್ನು ಸಂಪರ್ಕಿಸಿದಾಗ ಅದು ಮೋಸಗಾರನ ನಂಬರ್ ಆಗಿತ್ತು. ಅಷ್ಟರೊಳಗಾಗಿ ಆ ಅಪರಿಚಿತ ವ್ಯಕ್ತಿ ಮುರಳಿ ಬಾಬುವಿನಿಂದ 39,999+49,500+10,999 ರೂ.ನಂತೆ ಮೂರು ಬಾರಿ ಒಟ್ಟು 100498 ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿದ್ದಾನೆ. ನಂತರ ಮುರಳಿ ಬಾಬುವಿಗೆ ಹಣ ವರ್ಗಾವಣೆಯಾಗದಿರುವುದು ತಿಳಿದು ಬಂದಿದ್ದು , ಖಾತೆಯಲ್ಲಿ ಮಾತ್ರ ಹಣ ಕಡಿತವಾಗಿತ್ತು. ಕೂಡಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು , ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಾಗಾಗಿ ಇನ್ನುಮುಂದೆ ಆ ರೀತಿಯ ಆ್ಯಪ್ ಗಳಲ್ಲಿ ಹಣ ವರ್ಗಾವಣೆ ಮಾಡುವ ಮುನ್ನ ಹಲವು ಬಾರಿ ಯೋಚಿಸಿ..
Comments