ಫೋಟೋ ಶೂಟ್ ಮಾಡುವ ನೆಪದಲ್ಲಿ ಮಾಡೆಲ್ ಜೊತೆ ಅಸಭ್ಯ ವರ್ತನೆ: ಆರೋಪಿ ಬಂಧನ

ಇತ್ತಿಚಿಗೆ ಹೆಣ್ಣು ಮಕ್ಕಳ ಮೇಲಿನ ಅತ್ಯಚಾರ, ಲೈಂಗಿಕ ಕಿರುಕುಳ ಕೊಡುವುದು ಹೆಚ್ಚಾಗಿ ಬಿಟ್ಟಿದೆ.. ಕೆಲವೊಮ್ಮೆ ಸಾಮಾನ್ಯ ಹೆಣ್ಣು ಮಕ್ಕಳು ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿರುತ್ತದೆ. ದೊಡ್ಡ ದೊಡ್ಡ ಸೆಲಬ್ರೆಟಿಗಳಿಗೂ ಕೂಡ ಇದು ತಪ್ಪಿದಲ್ಲ.. ನಾಯಕ ನಟಿಯರು, ಮಾಡೆಲ್ ಗಳಿಗೆ ಆಗಿಂದಾಗೆ ಇಂತಹ ಅನುಭವಗಳು ಆಗುತ್ತಲೇ ಇರುತ್ತವೆ.. ಇದೀಗ ಮಾಡೆಲ್ ಜೊತೆ ಪೋಟೋಗ್ರಾಫರ್ ಅಸಭ್ಯವಾಗಿ ವರ್ತಿಸಿರುವ ಘಟನೆ ನಡೆದಿದೆ..
ಫೋಟೋ ಶೂಟ್ ಮಾಡಿಸುವ ನೆಪದಲ್ಲಿ ಮಾಡೆಲ್ ಜೊತೆಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಫೋಟೋಗ್ರಾಫರ್ ನನ್ನು ಅರೆಸ್ಟ್ ಮಾಡಲಾಗಿದೆ..ಇನ್ ಸ್ಟಾಗ್ರಾಂ ಮೂಲಕ ಮಾಡೆಲ್ ಪರಿಚಯಿಸಿಕೊಂಡ ಆರೋಪಿ ಫೋಟೋ ಶೂಟ್ ಮಾಡುವ ನೆಪದಲ್ಲಿ ಸ್ಟುಡಿಯೋಗೆ ಬರಲು ತಿಳಿಸಿದ್ದಾನೆ.. ಆ ಮಾಡೆಲ್ ಸ್ಟುಡಿಯೋಗೆ ಬಂದ ಸಂರ್ಭದಲ್ಲಿ ಅಲ್ಲಿ ಇದ್ದವರನ್ನು ಹೊರಗೆ ಕಳುಹಿಸಿ ಫೋಟೋ ಶೂಟ್ ಮಾಡುವ ನೆಪದಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪ ಮಾಡಲಾಗಿದೆ.. ಮಾಡೆಲ್, ಈ ಕುರಿತಾಗಿ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.. ನೇರವಾಗಿ ಪರಿಚಯವಾದ ವ್ಯಕ್ತಿಯನ್ನು ನಂಬುವುದೇ ಈ ಕಾಲದಲ್ಲಿ ಕಷ್ಟ.. ಅಂದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ವ್ಯಕ್ತಿಗಳನ್ನು ನಂಬುವ ಜನರಿಗೆ ಏನ್ನೆನ್ನಬೇಕೋ ಗೊತ್ತಿಲ್ಲ..
Comments