ಹುಷಾರ್..!! ಟಿಕ್ ಟಾಕ್’ಗೆ ರಾಜ್ಯದಲ್ಲಿ ಮತ್ತೊಂದು ಬಲಿ..?
ಸದ್ಯ ಪರಿಸ್ಥಿತಿ ಹೇಗಿದೆ ಅಂದ್ರೆ ಐದು ನಿಮಿಷ ಬಿಡುವು ಸಿಕ್ಕಿದ್ರೆ ಸಾಕು ಟಿಕ್ ಟಾಕ್ ನೋಡುತ್ತಾ ಕುಳಿತು ಬಿಡ್ತಾರೆ.. ಅಷ್ಟರ ಮಟ್ಟಿಗೆ ಟಿಕ್ ಟಾಕ್ ಫೇಮಸ್ ಆಗಿ ಬಿಟ್ಟಿದೆ.. ಮನರಂಜನೆಗಾಗಿ ಇರುವ ಆ್ಯಪ್ ಸಾಕಷ್ಟು ಕಲಾವಿದರನ್ನು ಬೆಳಸುತ್ತಿದೆ.. ಫಾಲೋವರ್ಸ್, ಲೈಕ್ಸ್ ಜಾಸ್ತಿಯಾಗಲಿ ಎಂದು ಮಾಡಬಾರದ ಸಾಹಸಗಳನ್ನು ಮಾಡಿ ಅಪ್ಲೋಡ್ ಮಾಡುತ್ತಾರೆ.. ಇದೀಗ ಟಿಕ್ ಟಾಕ್ ನಲ್ಲಿ ವಿಡಿಯೋ ಮಾಡಲು ಹೋಗಿ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ಕೋಲಾರ ತಾಲೂಕಿನ ವಡಗೇರಿ ಗ್ರಾಮದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಎಂದು ಮಾಲಾ ಗುರುತಿಸಲಾಗಿದೆ. ಸದ್ಯ ಮಾಲಾ ಅಂತಿಮ ವರ್ಷದ ಬಿ.ಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೋಲಾರ ಮಹಿಳಾ ಕಾಲೇಜಿನಲ್ಲಿ ಓದುತ್ತಿದ್ದಳು. ಆದರೆ, ಶುಕ್ರವಾರ ಸಂಜೆ ಮಾಲಾ ಟಿಕ್ ಟಾಕ್ ವಿಡಿಯೋ ಮಾಡುವ ವೇಳೆ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾಳೆ.. ಈ ರೀತಿಯ ಕೆಲವು ಘಟನೆಗಳಿಂದಾನೇ ಟಿಕ್ ಟಾಕ್ ಅನ್ನು ಬ್ಯಾನ್ ಮಾಡಿದ್ದಾದರೂ ಕೂಡ ಮತ್ತೆ ಚಾಲ್ತಿಗೆ ಬಂದಿತ್ತು. ಜೂನ್ 19 ರಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಗೋಡೆಕೆರೆ ಗ್ರಾಮದಲ್ಲಿ ವಿಡಿಯೋ ಸ್ಟಂಟ್ ಮಾಡಲು ಹೋಗಿದ್ದ ಯುವಕನೊಬ್ಬ ಕತ್ತು, ಬೆನ್ನು ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ್ದರು. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು. ಹೀಗಾಗಿ ಟಿಕ್ ಟಾಕ್ ಪುನಃ ಬ್ಯಾನ್ ಮಾಡುವ ಪ್ರಮೇಯ ಬಂದ್ರೂ ಕೂಡ ಬರಬಹುದು..
Comments