ನಿಧಿಗಾಗಿ `ನವಬೃಂದಾವನ'ವನ್ನು ಧ್ವಂಸಗೊಳಿಸಿದವರ ವಿರುದ್ದ ನಟ ಜಗ್ಗೇಶ್ ಕಿಡಿ ..!!

18 Jul 2019 4:04 PM | General
381 Report

ನಿಧಿಗಾಗಿ ನರಬಲಿ ಕೊಡುವಂತಹ ಜನ ಈಗಲೂ ಕೂಡ ಇದ್ದಾರೆ.. ನಿಧಿ ಆಸೆಗಾಗಿ ಪುಟ್ಟ ಪುಟ್ಟ ಕಂದಮ್ಮಗಳನ್ನೆ ಬಲಿ ಕೊಡ್ತಾರೆ.. ಇದೀಗ  ನಿಧಿ ಆಸೆಗಾಗಿ   ಐತಿಹಾಸಿಕ ಪ್ರಸಿದ್ಧ ನವಬೃಂದಾವನವನ್ನು ಕೆಲವು ಕಿಡಿಗೇಡಿಗಳು ನಿಧಿಗಾಗಿ ಧ್ವಂಸಗೊಳಿಸಿದ ಘಟನೆ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.. ನಿಧಿಗಾಗಿ ನವಬೃಂದಾವನವನ್ನೆ ದ್ವಂಸ ಮಾಡಿದ್ದಾರೆ.

ಆನೆಗುಂದಿ ಸಮೀಪವಿರುವ ನವಬೃಂದಾವನ ಗಡ್ಡೆ ತುಂಗಭದ್ರಾ ನದಿಯ ಮಧ್ಯದಲ್ಲಿದೆ. ಇಲ್ಲಿ ವ್ಯಾಸರಾಜರು ಸೇರಿದಂತೆ ಒಟ್ಟು ಒಂಬತ್ತು ಯತಿಗಳ ಸಮಾಧಿಗಳು ಇವೆ. ದುಷ್ಕರ್ಮಿಗಳು ನಿಧಿಯ ಆಸೆಗಾಗಿ ಬುಧವಾರ ರಾತ್ರಿ ನವಬೃಂದಾವನವನ್ನು ಅಗೆದು ಹಾಕಿ ಹಾಳು ಮಾಡಿದ್ದಾರೆ.  ಈ ದುಷ್ಕೃತ್ಯವನ್ನು ನಟ ನವರಸ ನಾಯಕ ಜಗ್ಗೇಶ್ ತೀವ್ರವಾಗಿ ಖಂಡನೆ ಮಾಡಿದ್ಧಾರೆ. . ಈ ಕುರಿತು ಟ್ವೀಟ್ ಮಾಡಿರುವ ಅವರು, ` ಅಯ್ಯೋ ಇದೆಂಥಾ ಹೀನಾ ಕೃತ್ಯ ಎಸಗಿದ್ದಾರೆ. ಇದನ್ನು ಮಾಡಿದವರ ವಂಶ ಸರ್ವನಾಶವಾಗುತ್ತದೆ. ನಮ್ಮ ಶ್ರೇಷ್ಠವಾದ ಸನಾತನ ಗುರುಪರಂಪರೆಗೆ ಕೈ ಹಾಕಿದ್ದಾರೆ. ಇಂಥ ಪಾಪಿಗಳಿಗೆ ಕ್ಷಮೆಯೇ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ನಿಧಿಗಾಗಿ ನರಬಲಿಯನ್ನು ಕೊಡುವವರು ಇನ್ನೂ ಇಂತಹುಗಳನ್ನು ಬಿಡುತ್ತಾರೆ.. ಇದರ ಬಗ್ಗೆ ಆದಷ್ಟು ಬೇಗ ತನಿಖೆ ಆಗಿ ಕ್ರಮ ಕೈಗೊಳ್ಳಬೇಕಾಗಿದೆ.

Edited By

Manjula M

Reported By

Manjula M

Comments