'ಉತ್ತರ ಪತ್ರಿಕೆ'ಯಲ್ಲೂ 'ನಿಖಿಲ್ ಎಲ್ಲಿದ್ದೀಯಪ್ಪಾ'ಪದ ಬಳಕೆ..!!!
ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಒಂದಷ್ಟು ಪದಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದವು.. ಕಳ್ಳೆತ್ತು, ಜೋಡೆತ್ತು, ನಿಖಿಲ್ ಎಲ್ಲಿದ್ದಿಯಪ್ಪ ಎಂಬ ಪದಗಳು ಹೆಚ್ಚು ಕೇಳಿಬರುತ್ತಿದ್ದವು.. ನಿಖಿಲ್ ಎಲ್ಲಿದಿಯಪ್ಪಾ ಎಂಬ ಶಬ್ಧ ಮಾತ್ರ ಅಬ್ಬಾ ಟ್ರೋಲಿಗರ ಬಾಯಿಗೆ ಆಹಾರವಾಗಿ ಬಿಟ್ಟಿತ್ತು... ಈ ಹೆಸರಿನಲ್ಲಿ ಸಿನಿಮಾ ಮಾಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ವೈರಲ್ ಆಗಿದ್ದ ನಿಖಿಲ್ ಎಲ್ಲಿದ್ದೀಯಪ್ಪಾ ಘೋಷಣೆ, ಈಗ ಮತ್ತೆ ಬೆಂಗಳೂರು ವಿವಿಯ ಪದವಿ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲೂ ಕೇಳಿ ಈ ಮೂಲಕ ಮತ್ತೆ ಮತ್ತೆ ನಿಖಿಲ್ ಎಲ್ಲಿದ್ದೀಯಪ್ಪಾ ಎನ್ನುವ ಪದ ವೈರಲ್ ತಮಾಷೆಯ ರಾಜಕೀಯ ಘೋಷಣೆ ಸಖತ್ ಸದ್ದು ಮಾಡುತ್ತಿದೆ.
ಕೆಲ ತಿಂಗಳ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಗಳು ನಡೆದಿದ್ದವು..., ಇದೀಗ ಆ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಶುರುವಾಗಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ಪ್ರಾಧ್ಯಾಪಕರಿಗೆ ವಿದ್ಯಾರ್ಥಿಗಳು ಬರೆದಿರುವ ಉತ್ತರ ಪತ್ರಿಕೆಯಲ್ಲಿನ ಸಾಲು ಕಂಡು ನಗುವಂತಾಗಿದೆ. ನಿಖಿಲ್ ಎಲ್ಲಿದ್ದೀಯಪ್ಪಾ.. ಇಂತಹ ಉತ್ತರ ಕಂಡ ಮೌಲ್ಯಮಾಪನದಲ್ಲಿ ತೊಡಗಿದ್ದ ಪ್ರಾಧ್ಯಾಪಕರು ನಗುವಂತಾಗಿದೆ.. ಅನೇಕ ಉತ್ತರ ಪತ್ರಿಕೆಯಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ ಎಂಬ ಮಾತು ಎಲ್ಲೆಡೆ ಕೇಳಿ ಬಂದಿದೆ. ಕೆಲವು ವಿದ್ಯಾರ್ಥಿಗಳು ಉತ್ತರ ಪತ್ರಿಕೆಯ ಕೊನೆಯಲ್ಲಿ ಹೀಗೆ ಬರೆದಿದ್ದರೇ, ಮತ್ತೆ ಕೆಲವು ವಿದ್ಯಾರ್ಥಿಗಳು ಇಡೀ ಉತ್ತರಪತ್ರಿಕೆಯ ಕೆಲ ಪುಟವನ್ನೇ ಇದಕ್ಕೆ ಬಳಸಿಕೊಂಡಿದ್ದಾರೆ. ಒಟ್ಟಿನಲ್ಲಿ ರಾಜಕೀಯದಲ್ಲಿ ಬಳಸಿಕೊಂಡಿರುವ ಪದಗಳು ವಿವಿ ಪರೀಕ್ಷೆಯಯೂ ಕೂಡ ಬಳಸಿಕೊಂಡಿರುವುದೇ ವಿಪರ್ಯಾಸ..
Comments