ನನ್ನ ಹೆಂಡ್ತಿ ಬೇಕೆ ಬೇಕು ಎಂದು ಟವರ್ ಏರಿದ ಭೂಪ..!!
ನಾವೆಲ್ಲ ಸಾಮಾನ್ಯವಾಗಿ ಹೆಂಡತಿಯ ಕಾಟ ತಪ್ಪಿದರೆ ಸಾಕಪ್ಪ.. ಅಂತ ಮಾತನಾಡಿಕೊಳ್ಳುವ ಗಂಡಂದಿರನ್ನು ನೋಡಿದ್ದೇವೆ..ಆದರೆ ನನಗೆ ಹೆಂಡ್ತಿ ಬೇಕೆ ಬೇಕು ಎನ್ನುವ ಗಂಡ ಇದೀಗ ಟವರ್ ಹತ್ತಿ ಕೂತಿದ್ದಾನೆ..ನನ್ನ ಹೆಂಡ್ತಿ ನನಗೆ ಬೇಕು..! ಎಂದು ತನ್ನ ಪ್ರೀತಿಯ ಮಡದಿಗಾಗಿ ಪತಿಯೊಬ್ಬ ಮೊಬೈಲ್ ಟವರ್ ಏರಿ ಕುಳಿತ ವಿಚಿತ್ರ ಘಟನೆಯೊಂದು ರಾಯಚೂರಿನಲ್ಲಿ ನಡೆದಿದೆ.
ರಾಯಚೂರಿನ ನಿಜಲಿಂಗಪ್ಪ ಕಾಲೋನಿಯ ಕೆಇಬಿ ಶಾಲೆಯ ಹತ್ತಿರ ಶಾಂತ ಕುಮಾರ್ ಎಂಬ ವ್ಯಕ್ತಿ ಬಿಎಸ್‌ಎನ್‌ಎಲ್ ಟವರ್ ಏರಿ ಕೂತಿದ್ದಾನೆ.. ತನಗೆ ನನ್ನ ಪತ್ನಿ ಬೇಕು, ಆಕೆಯ ಮನೆಯವರು ಅವಳನ್ನು ನನ್ನ ಮನೆಗೆ ಕಳಿಸಬೇಕೆಂದು ಆತ ಬೇಡಿಕೆ ಇಟ್ಟಿದ್ದಾನೆ ಎನ್ನಲಾಗಿದೆ.. ಶಾಂತ ಕುಮಾರ್ ಹಾಗೂ ಅಸ್ಕಿಹಾಳ ಗ್ರಾಮದ ಕವಿತಾ ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು.. ಆದರೆ ಈ ವಿವಾಹಕ್ಕೆ ಆಕೆಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದಾರೆ. ಕವಿತಾ ಮನೆಯವರು ಕರೆ ಮಾಡಿ "ನೀನು ಮನೆಗೆ ವಾಪಸ್ ಬರದೇ ಇದ್ದರೆ ನಾವೆಲ್ಲರೂ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ" ಎಂದು ಬೆದರಿಕೆ ಹಾಕಿದ್ದಾರೆ. ಹಾಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕವಿತಾ ತವರು ಮನೆಗೆ ಹೋಗಿದ್ದಾಳೆ. ಆದರೆ ಒಮ್ಮೆ ತವರಿಗೆ ಹೋದ ಅವಳನ್ನು ಮತ್ತೆ ಪತಿಯ ಮನೆಗೆ ಕಳಿಸದೆ ಕಾಡಿಸುತ್ತಿದ್ದಾರೆ ಎಂದು ಶಾಂತ ಕುಮಾರ್ ಆರೋಪಿಸಿದ್ದಾರೆ. ಪ್ರೀತಿಸಿ ಮದುವೆಯಾದವನ್ನು ಹೆಣ್ಣಿನ ಮನೆಯವರೆ ದೂರ ಮಾಡಿದ್ದಾರೆ..
Comments