ಬಸ್ ನಲ್ಲಿಯೇ ಹೃದಯಾಘಾತ..!! ಕಾಂಗ್ರೆಸ್ ಮಾಜಿ ಶಾಸಕ ನಿಧನ
ಕಾರ್ಕಳದ ಮಾಜಿ ಶಾಸಕರಾದ, ಕಾಂಗ್ರೆಸ್ ಹಿರಿಯ ನಾಯಕರಾದ ಎಚ್.ಗೋಪಾಲ ಭಂಡಾರಿ ಗುರುವಾರ ರಾತ್ರಿ ಕೆಎಸ್‌ಆರ್ ಟಿಸಿ ಬಸ್ ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.. ಗುರುವಾರ ಮಧ್ಯಾಹ್ನ ಬೆಂಗಳೂರಿನಿಂದ ಮಂಗಳೂರಿಗೆ ಕೆಎಸ್‌ಆರ್ ಟಿಸಿ ಬಸ್ ನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಬಸ್ ನಲ್ಲೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಸುಮಾರು ರಾತ್ರಿ 10.40 ರ ವೇಳೆಗೆ ಮಂಗಳೂರು ಬಸ್ ನಿಲ್ದಾಣ ತಲುಪಿದ ಬಳಿಕ ನಿದ್ದೆ ಮಾಡಿದ್ದಾರೆಂದು ತಿಳಿದು ಎಬ್ಬಿಸಲು ಪ್ರಯತ್ನ ಮಾಡಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.. ತದ ನಂತರ ಮೃತದೇಹವನ್ನು ಬಸ್ಸಿನಲ್ಲೇ ವೆನ್ ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಹೆಬ್ರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ್ದ ಎಚ್ ಗೋಪಾಲ್ ಭಂಡಾರಿ 1998 ಮತ್ತು 2008 ರಲ್ಲಿ ಕಾರ್ಕಳದಲ್ಲಿ ಎರಡು ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿದ್ದರು.. ಗಣ್ಯರು, ರಾಜಕೀಯ ವ್ಯಕ್ತಿಗಳು ಕಂಬನಿ ಮಾಡಿದ್ದಾರೆ.
Comments