ಬಸ್ ನಲ್ಲಿ ಮಹಿಳೆಯರ ಮೇಲಾಗುವ ಕಿರುಕುಳಕ್ಕೆ ಬ್ರೇಕ್ ಹಾಕಲು ಜಾರಿಗೆ ಬಂತು ನೂತನ ಕ್ರಮ

ಬಸ್ ನಲ್ಲಿ ಮಹಿಳೆಯರ ಮೇಲಾಗುವ ಕಿರುಕುಳಕ್ಕೆ ಬ್ರೇಕ್ ಹಾಕಲು ಜಾರಿಗೆ ಬಂತು ನೂತನ ಕ್ರಮಸಾಮಾನ್ಯವಾಗಿ ಹೆಣ್ಣು ಮಕ್ಕಳು ಹೊರಗಡೆ ಹೋದರೆ ಪೋಷಕರಿಗೆ ಭಯ ಕಾಡುವುದು ಕಾಮನ್.. ಎಲ್ಲಿ ಹೋದರು ಕೂಡ ಕಾಮುಕರ ಕಾಟ, ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತೆ ಆಗಿದೆ. ಅದರಲ್ಲೂ ಬಸ್ ನಲ್ಲಿ ಹೋಗುವ ಹೆಣ್ಣು ಮಕ್ಕಳಿಗಂತೂ ಲೈಂಗಿಕ ಕಿರುಕುಳ ನೀಡುತ್ತಿರುತ್ತಾರೆ. ಆದರೆ ಇದರ ಬಗ್ಗೆ ಯಾರು ಕೂಡ ಧನಿ ಎತ್ತುವುದಿಲ್ಲ.
ಹಾಗಾಗಿ ಬಸ್ ನಲ್ಲಿ ಮಹಿಳೆಯರ ಮೇಲಿನ ಕಿರುಕುಳ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ಇದೀಗ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಹೊಸ ಕ್ರಮವೊಂದನ್ನು ಕೈಗೊಳ್ಳಲಾಗಿದೆ. ಇದರಿಂದ ಮಹಿಳೆಯರಿಗೆ ಉಪಯೋಗವಾಗಲಿದೆ. ಇದೆ ಹಿನ್ನಲೆಯಲ್ಲಿ ಕೆಎಸ್ ಆರ್ ಟಿಸಿಯ ರಾತ್ರಿ ಬಸ್ ಗಳಲ್ಲಿ ಒಂದು ವಿಶೇಷ ಪ್ರಕಟಣೆ ಹೊರಡಿಸಿದೆ, ಇನ್ನೂ ಮುಂದೆ ಬಸ್ ಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರ ಬಗ್ಗೆ ಗೌರವದಿಂದ ನಡೆದುಕೊಳ್ಳುವಂತೆ ಹಾಗೂ ಆಕಸ್ಮಾತ್ ಯಾರಾದರೂ ಅಸಭ್ಯವಾಗಿ ಮಹಿಳೆಯರೊಂದಿಗೆ ವರ್ತಿಸಿದರೆ ಅದನ್ನು ಚಾಲಕರು ಮತ್ತು ನಿರ್ವಾಹಕರ ಗಮನಕ್ಕೆ ತರುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಾಗೇ ಯಾರಾದರೂ ಮಹಿಳೆಯರಿಗೆ ಕಿರುಕುಳ ಕೊಟ್ಟರೂ ಸಹ ಪ್ರಯಾಣಿಕರು ಮಹಿಳೆಯರ ಪರವಾಗಿ ನಿಂತು, ಲೈಂಗಿಕ ಕಿರುಕುಳ ನೀಡುವವರ ಬಗ್ಗೆ ನಿರ್ವಾಹಕರಿಗೆ ತಿಳಿಸುವಂತೆಯೂ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಇನ್ನುಮುಂದಾದರೂ ಮಹಿಳೆಯರು ನಿರಾಂತಕವಾಗಿ ಬಸ್ ಗಳಲ್ಲಿ ಪ್ರಯಾಣಿಸಬಹುದು ಎನ್ನಲಾಗಿದೆ. ಒಟ್ಟಿನಲ್ಲಿ ಸರ್ಕಾರವು ಕೂಡ ಇದರ ಬಗ್ಗೆ ಗಮನ ಹರಿಸಿರುವುದು ಪ್ರಶಂಸನೀಯ ವಿಚಾರ.
Comments