ರಾಜ್ಯ ಸರ್ಕಾರದಿಂದ ರೈತರಿಗೆ ಸಿಕ್ತು ಗುಡ್ ನ್ಯೂಸ್..!!

ರಾಜ್ಯ ಸರ್ಕಾರವು ಈಗಾಗಲೇ ರೈತರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಮತ್ತೊಮ್ಮೆ ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ. ಸಹಕಾರ ಸಂಘಗಳ ಮೂಲಕ ನೀಡುತ್ತಿರುವ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯವನ್ನು ಇದೇ ಸಾಲಿನಲ್ಲಿ 10 ಲಕ್ಷ ಹೊಸ ರೈತರಿಗೆ ವಿಸ್ತರಿಸಲು ರಾಜ್ಯ ಸರ್ಕಾರ ಇದೀಗ ಮುಂದಾಗಿದೆ.
ಸಹಕಾರ ಸಚಿವರಾದ ಬಂಡೆಪ್ಪ ಕಾಶೆಂಪೂರ ಅಧ್ಯಕ್ಷತೆಯಲ್ಲಿ ಸೋಮವಾರ ವಿಧಾನಸೌಧದಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು ಹಾಗೂ ರಾಜ್ಯದ ಎಲ್ಲ ಡಿಸಿಸಿ ಬ್ಯಾಂಕ್ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆದಿದೆ...ಈ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾಶೆಂಪೂರ ಸಹಕಾರಿ ಸಂಸ್ಥೆಗಳ ಬಡ್ಡಿ ರಹಿತ ಬೆಳೆ ಸಾಲದ ವ್ಯಾಪ್ತಿಯಲ್ಲಿ ಪ್ರಸ್ತುತ 22ಲಕ್ಷ ರೈತರಿದ್ದು, ಪದೇ ಪದೆ ಸಿಕ್ಕಿ ಅವರಿಗೇ ಸಾಲ ಸಿಗುತ್ತಿದೆ. ಆದ್ದರಿಂದ ಈ ಸೌಲಭ್ಯದಿಂದ ಹೊರ ಬಂದಿರುವ ರೈತರನ್ನು ಹೊಸದಾಗಿ ಶೂನ್ಯ ಬಡ್ಡಿ ಸಾಲದ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ. ಈ ಸಾಲದಿಂದ ರೈತರ ಅನುಕೂಲವಾಗಬೇಕು ಎಂಬುದು ರಾಜ್ಯ ಸರ್ಕಾರದ ಚಿಂತನೆಯಾಗಿದೆ.
Comments