ಮೋಜು ಮಸ್ತಿಗೆ ತೆರಳಿದ್ದ ಜೋಡಿ ಆಯತಪ್ಪಿ ಮಹಡಿಯಿಂದ ಬಿದ್ದು ಸಾವು

ವಾರಾಂತ್ಯ ಬಂದ್ರು ಸಾಕು ಮೋಜು ಮಸ್ತಿಗೇನು ಕಡಿಮೆ ಇಲ್ಲ.. ಅದರಲ್ಲೂ ಬೆಂಗಳೂರಿನಲ್ಲಿ ಪಬ್ ಕ್ಲಬ್ ಅಂತ ಸುತ್ತುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಇದರಿಂದ ಕೆಲವೊಮ್ಮೆ ಅನಾಹುತಗಳು ಹೆಚ್ಚಾಗಿಯೇ ನಡೆಯುತ್ತವೆ..ನಗರದ ಚರ್ಚ್ ಸ್ಟ್ರೀಟ್ ನ ಆಯಶ್ ಬಿಯರ್ ಪಬ್ ಗೆ ವಾರಾಂತ್ಯದ ಮೋಜಿಗೆ ತೆರಳಿದ್ದ ಯುವಜೋಡಿ ಕಟ್ಟಡದಿಂದ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಖಾಸಗಿ ಪತ್ರಿಕೆಯೊಂದರ ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪವನ್ ಅತ್ತಾವರ್ ಹಾಗೂ ವೇದಾ ಆರ್ ಮೃತಪಟ್ಟ ದುರ್ದೈವಿ ಜೋಡಿಗಳಾಗಿದ್ದಾರೆ..
ಶುಕ್ರವಾರ ರಾತ್ರಿ ಸುಮಾರು 11.30 ಕ್ಕೆ ಪವನ್ ಅತ್ತಾವರ್ ಹಾಗೂ ವೇದಾ ಎಂಬುವರು ಚರ್ಚ್ ಸ್ಟ್ರೀಟ್ ರಸ್ತೆಯಲ್ಲಿರುವ ಆಶ್ ಬೀರ್ ಪಬ್ ಗೆ ತೆರೆಳಿದಿದ್ದರು.. ಪಬ್ ನ ಕೊನೆಯ ರೂಫ್ ಪ್ಲೋರ್ ನಲ್ಲಿ ಕುಳಿತು ಪಾರ್ಟಿ ಮಾಡಿದ್ದ ಪವನ್ ಹಾಗೂ ವೇದಾ ರೂಫಿನ ತುದಿಯಲ್ಲಿ ನಿಂತಿದ್ದರು. ಈ ವೇಳೆ ಆಯಾತಪ್ಪಿ ಮೂರನೇ ಮಹಡಿಯಿಂದ ನೆಲಕ್ಕೆ ಬಿದ್ದಿದ್ದಾರೆ. ಘಟನೆಯಲ್ಲಿ ಪವನ್ ಹಾಗೂ ವೇದಾ ತಲೆಯ ಭಾಗಕ್ಕೆ ಗಾಯವಾಗಿ ತೀವ್ರ ರಕ್ತಸ್ರಾವವಾಗಿತ್ತು. ಇದೇ ವೇಳೆ ನೂತನ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ರೌಂಡ್ಸ್ ತೆರಳಿದ್ದ ವೇಳೆಯೇ ಈ ಘಟನೆ ನಡೆದಿದ್ದು, ಜೋಡಿ ಕಟ್ಟಡದಿಂದ ಕೆಳಗೆ ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆd. ಹಾಗಾಗಿ ಮೋಜು ಮಸ್ತಿ ಅಂತ ಮಾಡುವಾಗ ತುಂಬಾ ಹುಷಾರಾಗಿ ಇರಬೇಕು..
Comments