ಚಾಲಕರಿಗೆ ಸಿಕ್ತು ಗುಡ್ ನ್ಯೂಸ್..! ಏನ್ ಗೊತ್ತಾ..?
ದೇಶದಲ್ಲಿ ನಿರುದ್ಯೋಗ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿವೆ… ನಿರುದ್ಯೋಗ ಸಮಸ್ಯೆಗಳನ್ನು ಕಡಿಮೆ ಮಾಡಲು ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ಉದ್ಯೋಗಾವಕಾಶಗಳನ್ನು ಹೆಚ್ಚಿನ ರೀತಿಯಲ್ಲಿ ಕಲ್ಪಿಸುವ ನಿಟ್ಟಿನಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಚಾಲಕರಿಗೆ ಕನಿಷ್ಟ ಶಿಕ್ಷಣ ಅರ್ಹತೆಯೆ ಅಗತ್ಯವನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಾರಿಗೆ ಸಚಿವಾಲಯ ತಿಳಿಸಿದೆ.. ಇದರಿಂದ ವಿದ್ಯಾರ್ಹತೆ ಇಲ್ಲದವರಿಗೂ ಕೂಡ ಸಹಾಯವಾಗುತ್ತದೆ.
ಚಾಲಕರ ಕೋಪಕ್ಕೆ ಕಾರಣವಾಗಿದ್ದ ಕನಿಷ್ಟ ಶಿಕ್ಷಣ ಇರಬೇಕೆಂಬ ನಿಯಮವನ್ನು ಕೇಂದ್ರ ಸರ್ಕಾರ ಇದೀಗ ಕೈಬಿಟ್ಟಿರುವುದು ಎಲ್ಲರಿಗೂ ಕೂಡ ಸಂತಸವನ್ನು ತಂದಿದೆ. ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುವ ನಿಟ್ಟಿನಲ್ಲಿ ಈ ನಿಯಮವನ್ನು ಕೈ ಬಿಡಲಾಗಿದೆ. ಸೆಂಟ್ರಲ್ ಮೋಟಾರು ವಾಹನ ನಿಯಮಗಳು, 1989 ರ ನಿಯಮ 8 ರ ಅಡಿಯಲ್ಲಿ, ಸಾರಿಗೆ ವಾಹನ ಚಾಲಕನು 8 ನೇ ತರಗತಿಯಲ್ಲಿ ಕಡ್ಡಾಯವಾಗಿ ಉತ್ತೀರ್ಣನಾಗಿರಬೇಕು ಎಂಬ ನಿಯಮವಿತ್ತು. ಕನಿಷ್ಠ ಶೈಕ್ಷಣಿಕ ವಿದ್ಯಾರ್ಹತೆ ತೆಗೆದು ಹಾಕಲು ರಸ್ತೆ ಸಾರಿಗೆ ಸಚಿವಾಲಯ ಅಧಿಕೃತ ಆದೇಶವನ್ನು ಪ್ರಕಟಣೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಔಪಚಾರಿಕ ಶಿಕ್ಷಣ ಪಡೆಯದವರು ಹೆಚ್ಚಿನ ಪ್ರಮಾಣದಲ್ಲಿದ್ದು, ನಿರುದ್ಯೋಗವೂ ಇದೆ. ಜೊತೆಗೆ ಇವರು ಚಾಲನಾ ವೃತ್ತಿಯಲ್ಲಿ ಉತ್ತಮ ಕೌಶಲ್ಯ ಹೊಂದಿದ್ದಾರೆ. ಹಾಗಾಗಿ ಕನಿಷ್ಟ ವಿದ್ಯಾರ್ಹತೆ ನಿಯಮವನ್ನು ಕೈ ಬಿಟ್ಟಿದ್ದಾರೆ.
Comments