Becarefull: ಗೋ ಕಾರ್ಟಿಂಗ್ ಕಾರ್ ಚಕ್ರಕ್ಕೆ ಸಿಲುಕಿ ಚರ್ಮ ಸಹಿತ ಕಿತ್ತು ಬಂತು ಮಹಿಳೆಯ ಕೂದಲು

ಏನೋ ಮಾಡಲು ಹೋಗಿ ಏನೋ ಮಾಡಿದ್ದರಂತೆ ಆಗಾಯ್ತು.. ಅರೇ ಹೌದಾ ಯಾಕ್ ಹೀಗ್ ಹೇಳ್ತಿದ್ದಾರೆ ಅನ್ಕೊಂಡ್ರ.. ನಾವು ಮೊದಲು ಯಾವುದೇ ಕೆಲಸವನ್ನು ಮಾಡಬೇಕಾದರೆ ಅದಕ್ಕೆ ಒಂದಿಷ್ಟು ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ… ಇದೀಗ ಬೆಂಗಳೂರಿನ ಪ್ರತಿಷ್ಠಿತ ಕ್ಲಬ್ ಒಂದರಲ್ಲಿ ಗೋ ಕಾರ್ಟಿಂಗ್ ಕಾರ್ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರ ತಲೆ ಕೂದಲು ಚರ್ಮ ಸಮೇತ ಕಿತ್ತು ಬಂದಿರುವ ಘಟನೆ ನಡೆದಿದೆ..
ಬಿ. ನಾರಾಯಣಪುರ ನಿವಾಸಿಯಾಗಿರುವ ಮಹಿಳೆ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಲೆಗೆ ಶಸ್ತ್ರಚಿಕಿತ್ಸೆ ನಡೆಸುವ ಅಗತ್ಯವಿದೆ ಎಂದು ವೈದ್ಯರು ಹೇಳಲಾಗಿದೆ. ಬೆಂಗಳೂರಿನ ಹೇಮಂತ್ ನಗರದಲ್ಲಿರುವ ಈಜೋನ್ ಕ್ಲಬ್ ನಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಪುಷ್ಪಲತಾ ಗೋ ಕಾರ್ಟಿಂಗ್ ಕಾರ್ ರೇಸ್ ಮಾಡುತ್ತಿದ್ದರು. ಆ ಸಮಯದಲ್ಲಿ ಕಾರಿನ ಚಕ್ರಕ್ಕೆ ಕೂದಲುಗಳು ಸಿಲುಕಿ ಚರ್ಮ ಸಹಿತ ಅರ್ಧದಷ್ಟು ಕೂದಲು ಕಿತ್ತು ಬಂದಿವೆ ಎಂದು ಹೇಳಲಾಗುತ್ತಿದೆ. ಕಂಪನಿಯ ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯ ಉಂಟು ಮಾಡಿದ ಆರೋಪದಲ್ಲಿ ಕ್ಲಬ್ ಮೇಲ್ವಿಚಾರಕರ ವಿರುದ್ಧ ಮಾರತ್ ಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ಒಟ್ಟಾರೆಯಾಗಿ ನಾವು ಮೊದಲೇ ಹೇಳಿದ ಹಾಗೆ ಏನೋ ಮಾಡಲು ಹೋಗಿ ಏನೋ ಆಗಿದೆ ಅಷ್ಟೆ.ಇನ್ನೂ ಮುಂದೆ ಆದರೂ ಈ ರೀತಿಯ ಸಾಹಸಗಳಿಗೆ ಕೈ ಹಾಕುವಾಗ ಮುಂಜಾಗ್ರತೆಯಿಂದ ಇರುವುದು ಲೇಸು..
Comments