‘ಟೀ ಕಪ್ ನೀವೆ ಇಟ್ಟುಕೊಳ್ಳಿ, ನಾವು ವರ್ಲ್ಡ್ ಕಪ್ ಗೆಲ್ಲುತ್ತೇವೆ’ ಎಂದು ಪಾಕಿಸ್ತಾನಕ್ಕೆ ಪಂಚ್ ಕೊಟ್ಟ ಸ್ಟಾರ್ ನಟಿ..!!
ನೆನ್ನೆಯಷ್ಟೆ ಪಾಕಿಸ್ತಾನ ಮತ್ತು ಇಂಡಿಯಾದ ಹೈ ವೋಲ್ಟೇಜ್ ಪಂದ್ಯಕ್ಕೆ ತೆರೆ ಬಿದ್ದಿದೆ. ಪಾಕಿಸ್ತಾನದ ವಿರುದ್ದ ಟೀಂ ಇಂಡಿಯಾ ಗೆದ್ದು ಬೀಗುತ್ತಿದೆ. ಟೀಂ ಇಂಡಿಯಾ ಭರ್ಜರಿ ಜಯವನ್ನು ಸಾಧಿಸಿದೆ. ಈ ಸಂಭ್ರಮವನ್ನು ಭಾರತೀಯರು ತುಂಬಾ ಸಂತಸದಿಂದ ಸಂಭ್ರಮಿಸಿದರು... ಈ ವಿಜಯದ ಹಿನ್ನಲೆಯಲ್ಲಿಯೇ ನಟಿ ಪಾರೂಲ್ ಯಾದವ್ ಪಾಕಿಸ್ತಾನಕ್ಕೆ ಸಖತ್ತಾಗಿಯೇ ಪಂಚ್ ನೀಡಿದ್ದಾರೆ.. ಸ್ವಲ್ಪ ದಿನಗಳ ಹಿಂದೆ ಪಾಕಿಸ್ತಾನದ ಮಾಧ್ಯಮವೊಂದು ಭಾರತವನ್ನ ಹೀಯಾಳಿಸುವ ರೀತಿ ಜಾಹೀರಾತು ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದು ಎಲ್ಲರಿಗೂ ತಿಳಿದೆ ಇದೆ..
ಪೆಬ್ರವರಿ 14 ರಂದು ಪುಲ್ವಾಮ ದಾಳಿಯ ನಂತರ ಭಾರತ ಪಾಕಿಸ್ತಾನದ ವಿರುದ್ದ ಕೆಂಡಾಮಂಡಲವಾಯಿತು. ಪಾಕ್ ಗಡಿಯೊಳಗೆ ನುಗ್ಗಿ ಬಾಲ್ ಕೋಟ್ ಮೇಲೆ ಏರ್ ಸ್ಟ್ರೈಕ್ ಮಾಡಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರಂತೆ ಕಾಣುವ ವ್ಯಕ್ತಿಯನ್ನ ಬಳಸಿಕೊಂಡು ಭಾರತವನ್ನ ಅಣುಕಿಸುವಂತಹ ಜಾಹೀರಾತು ಮಾಡಿ ಪಾಕಿಸ್ತಾನ ಮಾಧ್ಯಮವೊಂದು ಟಿವಿಯಲ್ಲಿ ಪ್ರಸಾರ ಮಾಡಿತ್ತು. ಈಗಾಗಲೆ ಪೂನಂ ಪಾಂಡೆ ತಿರುಗೇಟು ಕೊಟ್ಟಿದ್ದರು,.. ಇದೀಗ ಪಾರೂಲ್ ಯಾದವ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಅಭಿನಂದನ್ ವರ್ತಮಾನ್ ರೀತಿ ಮೀಸೆ ಧರಿಸಿ ಟೀ ಕಪ್ ನೀವೆ ಇಟ್ಟುಕೊಳ್ಳಿ, ನಾವು ವರ್ಲ್ಡ್ ಗೆಲ್ಲುತ್ತೇವೆ ಎಂದು ಪಾರೂಲ್ ಉತ್ತರ ನೀಡಿದ್ದಾರೆ.. ಒಟ್ಟಾರೆಯಾಗಿ ಪಾಕಿಸ್ತಾನ ಪದೇ ಪದೇ ಭಾರತೀಯರ ಕೆಂಗಣ್ಣಿಗೆ ಗುರಿಯಾಗುತ್ತಿದೆ.. ಇದಕ್ಕೆ ಪ್ರತ್ಯುತ್ತರ ನೆನ್ನೆ ನಡೆದ ಇಂಡಿಯಾ ಮತ್ತು ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದಿರುವುದೇ ಸಾಕ್ಷಿ ಎನ್ನುತ್ತಾರೆ ಅಭಿಮಾನಿಗಳು..
Comments