ಲೋಕಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ರಾಧಿಕಾ ಪಂಡಿತ್ ಅಂತೆ..!! ಕ್ಷೇತ್ರ ಯಾವುದು ಗೊತ್ತಾ…?
ಲೋಕಸಭಾ ಚುನಾವಣೆಯ ಫಲಿತಾಂಶವು ರಾಜ್ಯದಲ್ಲಿ ಒಂದಿಷ್ಟು ಸಂಚಲನ ಮೂಡಿಸಿದಂತೂ ಸುಳ್ಲಲ್ಲ.,.. ಲೋಕಸಮರದ ಫಲಿತಾಂಶ ಬಂದು ಇನ್ನೂ ಒಂದು ತಿಂಗಳೂ ಕೂಡ ಕಳೆದಿಲ್ಲ… ಆಗಲೇ ಮತ್ತೆ ಚುನಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ… ಮುಂದಿನ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಬಗ್ಗೆ ಮಾತನಾಡುತ್ತಿದ್ದಾರೆ, ಲೋಕಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕುತೂಹಲಕಾರಿಯಾದ ವಿಷಯವೊಂದು ಹರಿದಾಡುತ್ತಿದೆ.
ಸುಮಲತಾ ಪರವಾಗಿ ಕ್ಯಾಂಪೇನ್ ಮಾಡಿದ ಹಾಗು ಸುಮಲತಾರ ಗೆಲುವಿಗೆ ಕಾರಣವಾದ ಯಶ್ ಪತ್ನಿ ಸ್ಯಾಂಡಲ್ ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಮುಂದಿನ ಹಾಸನದ ಲೋಕಸಭಾ ಅಭ್ಯರ್ಥಿಯಂತೆ..ಈ ರೀತಿಯ ವಿಷಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮಂಡ್ಯದಲ್ಲಿ ಸುಮಲತಾ ಗೆದ್ದಿರುವ ಕಾರಣದಿಂದಾಗಿ ರಾಧಿಕಾ ಹೆಸರನ್ನು ಹಾಸನದಲ್ಲಿ ತೇಲಿಬಿಡಲಾಗುತ್ತಿದೆ. ಅಷ್ಟೆ ಅಲ್ಲದೆ “ಗೌಡ್ತಿ ಯಶ್ ಪತ್ನಿ” ಅಂತ ಪ್ರಚಾರ ಮಾಡುತ್ತಿದ್ದಾರೆ. ಅಭಿಮಾನಿಗಳ ಪ್ರಚಾರಕ್ಕೆ ಟಾಂಗ್ ಕೊಟ್ಟಿರುವ ನಿಖಿಲ್ ಕುಮಾರಸ್ವಾಮಿ ಫ್ಯಾನ್ಸ್, ಇನ್ನು ಏನೇನು ನೋಡ್ಬೇಕು ಗುರು ಈ ಕಣ್ಣಲ್ಲಿ ಎಂದು ಟ್ರೋಲ್ ಮಾಡಿ ಕಾಲೆಳೆದಿದ್ದಾರೆ. ಮಗಳ ಜೊತೆ ಕಾಲ ಕಳೆಯುತ್ತಿರುವ ರಾಧಿಕ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡರು ಕೂಡ ಆಶ್ಚರ್ಯ ಪಡಬೇಕಿಲ್ಲ..
Comments