ನಿಮ್ಮ ಬಳಿ BPL ಕಾರ್ಡ್ ಇದೆಯಾ…? ಹಾಗಾದ್ರೆ ಈ ಸುದ್ದಿಯನ್ನು ತಪ್ಪದೆ ಓದಿ…
ಬಡತನ ರೇಖೆಗಿಂತ ಕೆಳಗಿರುವವರಿಗೆ ರಾಜ್ಯ ಸರ್ಕಾರವು ಬಿ ಪಿ ಎಲ್ ಕಾರ್ಡ್ ನೀಡಿದೆ… ಈಗಾಗಲೇ ನಾವು ರೇಷನ್ ಪಡೆದುಕೊಳ್ಳಲು ಬಯೋಮೆಟ್ರಿಕ್ ಕಡ್ಡಾಯವಾಗಿದೆ.. ಇದೀಗ ರಾಜ್ಯದ ಎಲ್ಲೆಡೆ ಪಡಿತರ ಚೀಟಿಯ ಬಯೋಮೆಟ್ರಿಕ್ ಮರುದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಇಲ್ಲಿಯವರೆಗೆ ಇದ್ದಂತ ಪುರುಷ ಪ್ರಧಾನ ಪಡಿತರ ಚೀಟಿಯ ಮುಖ್ಯಸ್ಥರ ಸ್ಥಾನದಲ್ಲಿ ಇದೀಗ ಕುಟುಂಬದ ಮಹಿಳೆಯ ಹೆಸರು ಇರುತ್ತದೆ.. ಇನ್ನೂ ಮುಂದೆ ಮನೆಯ ಮಹಿಳೆ ಯಜಮಾನಿಯಾಗಿದ್ದಾಳೆ.
ಪಡಿತರ ಚೀಟಿಯಲ್ಲಿ ಇದೀಗ ಯಜಮಾನಿಯ ಸ್ಥಾನದಲ್ಲಿ ಮಹಿಳೆಯನ್ನು ತೋರಿಸಲೇ ಬೇಕು.. ಈ ಬಾರಿ ಸಾಕಷ್ಟು ಬದಲಾವಣೆಗಳು ಪಡಿತರ ಚೀಟಿಯಲ್ಲಿ ಕಾಣ ಸಿಗುತ್ತವೆ.. ಮನೆಯ ಮಹಿಳೆಯೇ ಯಜಮಾನಿಯ ಸ್ಥಾನ ಸಿಗಲಿದೆ. ಅಂದಹಾಗೇ ಭಾರತೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಸೌಲಭ್ಯ ಒದಗಿಸಬೇಕಾದಲ್ಲಿ ಮಹಿಳೆಯೇ ಮನೆಯ ಯಜಮಾನಿ ಎಂದು ಪರಿಗಣಿಸಲು ಸೂಚಿಸಲಾಗಿದೆ. ಹೀಗಾಗಿ ಇದೀಗ ಬಯೋ ಮೆಟ್ರಿಕ್ ದಾಖಲಾತಿಯ ಸಂದರ್ಭದಲ್ಲಿ ಆಹಾರ ಮತ್ತು ನಾಗರೀಕ ಪೂರಕೇ ಇಲಾಖೆಯ ಅಧಿಕಾರಿಗಳು ಸೂಚಿಸಿದಂತೆ, ಕುಟುಂಬದ ಯಜಮಾನ ತಂದೆ, ಮಗನಿದ್ದ ಸ್ಥಾನಕ್ಕೆ, ಯಜಮಾನಿಯಾಗಿ ಮಹಿಳೆಯನ್ನು ಸೂಚಿಸಲಾಗುತ್ತಿದೆ. ಈ ಮೂಲಕ ಭಾರತೀಯ ಆಹಾರ ಭದ್ರತಾ ಕಾಯ್ದೆಯ ನಿಯಮವನ್ನು ಪಾಲಿಸಲಾಗುತ್ತಿದೆ. ರಾಜ್ಯದ ಎಲ್ಲಾ ಕಡೆ ಪಡಿತರ ಚೀಟಿದಾರರ ಬೆರಳಚ್ಚು ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಪ್ರಕ್ರಿಯೆ ಜುಲೈ ಅಂತ್ಯದೊಳಗೆ ಮುಗಿಸಲು ಕೂಡ ಸೂಚಿಸಿದೆ. ನೀವು ಅಷ್ಟರೊಳಗೆ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಬೆರಳಚ್ಚನ್ನು ದಾಖಲಿಸಲಿಲ್ಲ ಎಂದಾದರೆ ಆಗಸ್ಟ್ ನಿಂದ ನೀಡಲಾಗುವ ಪಡಿತರ ದಾನ್ಯ ಬಂದ್ ಆಗಲಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ಈ ಕೂಡಲೇ ನಿಮ್ಮ ಬೆರಳಚ್ಚನ್ನು ದಾಖಲಿಸಿ.
Comments