ಮರ ಕಡಿಯೋಕೆ ಬಂದ್ರೆ ನಾನಂತೂ ಸುಮ್ಮನಿರಲ್ಲ ಎಂದ ಸಾಲು ಮರದ ತಿಮ್ಮಕ್ಕ..!!

04 Jun 2019 2:18 PM | General
549 Report

ನೈಸರ್ಗಿಕವಾಗಿ ಸಿಗುವ ಗಾಳಿಯಿಂದ ನಮ್ಮ ಆರೋಗ್ಯ ಸ್ಥಿರವಾಗಿರುತ್ತದೆ. ಇಂದಿನ ಈ ಕಾಂಕ್ರಿಟ್ ಯುಗದಲ್ಲಿ ಗಿಡ ಮರಗಳೆಲ್ಲಾ ನಾಶವಾಗುತ್ತಿದೆ.. ಇದರಿಂದ ನಮಗೆ ಸ್ವಚ್ಚಂದ ಗಾಳಿಯೇ ಸಿಗದಂತೆ ಆಗಿದೆ.. ಇನ್ನೂ ಕೆಲವಡೆ ಮರಗಳು ಆಗೆಯೇ ಉಳಿದುಕೊಂಡಿವೆ.. ಆದರೆ ರಸ್ತೆಗಳನ್ನು ಮಾಡಬೇಕೆಂದು ಇರುವ ಒಂದಿಷ್ಟು ಮರಗಳನ್ನು ಕೂಡ ಕಡಿಯಲು ಮುಂದಾಗುತ್ತಿದ್ದಾರೆ.. ಇದೀಗ ಪದ್ಮಶ್ರೀ ಪುರಸ್ಕೃತರಾದ ಸಾಲು ಮರದ ತಿಮ್ಮಕ್ಕ ಬೆಳಿಸಿದ ಮರಗಳಿಗೂ ಕೂಡ ಅದೇ ಸಮಸ್ಯೆ ಎದುರಾಗಿದೆ.

ಮರಗಳನ್ನು ಕಡಿಯೋಕೆ ನಾವು ಬಿಡಲ್ಲ, ನಾನು ನನ್ನ ಮಗ ಮರದ ಮುಂದೆ ಮಲಗ್ತೇವೆ ಎಂದು ಪದ್ಮಶ್ರೀ ಪುರಸ್ಕೃತ ಸಾಲು ಮರದ ತಿಮ್ಮಕ್ಕ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತಿಮ್ಮಕ್ಕನವರು  ಮರ ಕಡಿಯೋಕೆ ಬಂದರೆ ನಾನು ಸುಮ್ಮನಿರಲ್ಲ, ನಾನು ನೆಟ್ಟು ನೀರು ಹಾಕಿ ಬೆಳೆಸಿದ ಮರಗಳನ್ನು ಕಡಿಯಬಾರದು.  ಇದರ ಬಗ್ಗೆ ನಾನು ಪರಮೇಶ್ವರಪ್ಪ ಮತ್ತು ಕುಮಾರಸ್ವಾಮಿಯವರಿಗೆ ಮನವಿ ಮಾಡಿಕೊಂಡಿದ್ದೇವೆ ಎಂದರು. . ಅವರು ಯಾವುದೇ ಕಾರಣಕ್ಕೂ ಮರ ಕಡಿಸಲ್ಲ ಎಂದಿದ್ದಾರೆ. ನಾನು ಬೆಳೆಸಿದ ನೂರಾರು ಮರಗಳು ಹೋಗ್ತಿದ್ದವು,  ಈಗ ಅವರ ಭರವಸೆಯಿಂದ ಸಂತಸವಾಗಿದೆ ಎಂದು ಸಾಲುಮರದ ತಿಮ್ಮಕ್ಕ ಸ್ಪಷ್ಟಪಡಿಸಿದರು. ಮರಗಳನ್ನು ಬೆಳಸಿ, ಪೋಷಿಸಿ  ಅವುಗಳನ್ನು ಇಷ್ಟು ಎತ್ತರಕ್ಕೆ ಬೆಳಸಿ ಕಣ್ಣ ಮುಂದೆಯೇ ನಾಶವಾಗುತ್ತವೆ ಎಂದರೆ ಹೇಗೆ ಹೇಳಿ.. ಈ ಬಗ್ಗೆ ಕುಮಾರಸ್ವಾಮಿಯವರು ಕೂಡ ಭರವಸೆಯನ್ನು ನೀಡಿದ್ದಾರೆ. ಈ ಭರವಸೆಯನ್ನು ಕಂಡು ತಿಮ್ಮಕ್ಕ ಸಂತಸದಲ್ಲಿದ್ದಾರೆ.

Edited By

Manjula M

Reported By

Manjula M

Comments