ದಚ್ಚು ಅಭಿಯ ಈ ಪೋಟೋ  ನೋಡಿ ಸುಮಲತಾ ಹೇಳಿದ್ದೇನು ಗೊತ್ತಾ..?

31 May 2019 5:35 PM | General
397 Report

ಲೋಕಸಭೆಯನ್ನು ಗೆದ್ದು ವಿಜಯಶಾಲಿಯಾಗಿ ಬೀಗುತ್ತಿರುವ ಸುಮಲತಾ ಅಂಬರೀಶ್ ಬುಧವಾರ ಮಂಡ್ಯದಲ್ಲಿ ಸ್ವಾಭಿಮಾನ ವಿಜಯೋತ್ಸವವನ್ನು ಹಮ್ಮಿಕೊಂಡಿದ್ದರು… ಭರ್ಜರಿ ಗೆಲವು ಸಾಧಿಸಿದ ಸುಮಲತಾ ಮಂಡ್ಯ ಜನತೆಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಅಂಬಿ ಹುಟ್ಟುಹಬ್ಬದ ದಿನವೇ ಸ್ವಾಭಿಮಾನ ವಿಜಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.. ಆ ಕಾರ್ಯಕ್ರಮದಲ್ಲಿ ಸುಮಲತಾ ಗೆಲುವಿಗೆ ಶ್ರಮಿಸಿದವರೆಲ್ಲಾ ಭಾಗವಹಿಸಿದ್ದರು… ಜೋಡೆತ್ತು ಎಂದು ಫೇಮಸ್ ಆಗಿದ್ದ ದರ್ಶನ್ ಮತ್ತು ಯಶ್ ಹಾಗೂ ಜೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಪ್ರಮುಖ ಆಕರ್ಷಣೆಯಾಗಿದ್ದರು..

ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದುದ್ದಕ್ಕೂ ಅಂಬಿ ಪುತ್ರ ಅಭಿಯನ್ನು ಬಿಟ್ಟುಕೊಟ್ಟಿಲ್ಲ..ಅಭಿಯನ್ನು ಯಶ್ ಮತ್ತು ದರ್ಶನ್ ಎಲ್ಲಿಯೂ ಬಿಟ್ಟುಕೊಡಲಿಲ್ಲ… ಅಂಬರೀಶ್ ಅವರನ್ನು ಹೇಗೆ ಬೆಳಸಿದರೋ ಅದೇ ರೀತಿಯಾಗಿ ಅವರ ಮಗನನ್ನು ಕೂಡ ಬೆಳಸಿ ಎಂದು ಹೇಳಿಕೊಂಡರು.. ಮಾತನಾಡುವ  ಮೊದಲು  ವೇದಿಕೆ ಮುಂಭಾಗದಲ್ಲಿ ಕುಳಿತಿದ್ದಾಗ  ಅಭಿಷೇಕ್ ಅವರನ್ನ ದರ್ಶನ್ ಅಪ್ಪಿಕೊಂಡು ಕೂತಿದ್ದರು.. ಈ ಅದ್ಭುತ ಕ್ಷಣ ಫೋಟೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಲೈಕ್ಸ್ ಪಡೆದುಕೊಳ್ಳುತ್ತಿದೆ. ಇದೇ ಫೋಟೋವನ್ನ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಸುಮಲತಾ ಈ ಪ್ರೀತಿ ಯಾವಾಗಲೂ ಇರಲಿ ಎಂದು ಕ್ಯಾಪ್ಷನ್ ನೀಡಿದ್ದಾರೆ.. ಒಟ್ಟಾರೆಯಾಗಿ ಮಂಡ್ಯದ ಸ್ವಾಭಿಮಾನಿ ವಿಜಯೋತ್ಸವ ಅನೇಕ ನಿದರ್ಶನಗಳಿಗೆ ಸಾಕ್ಷಿಯಾಯಿತು.

Edited By

Manjula M

Reported By

Manjula M

Comments