ರಾಜಕೀಯ ಮರೆತು ಮತ್ತೆ ಒಂದ್ರಾದ ಅಭಿ ಮತ್ತು ನಿಖಿಲ್..!!! ಕುತೂಹಲ ಕೆರಳಿಸಿದ ನಿಖಿಲ್ ನಡೆ..!!!

ಸಾಮಾನ್ಯವಾಗಿ ರಾಜಕೀಯ ಅಂದ ಮೇಲೆ ಜಗಳಗಳು ಕಿತ್ತಾಟಗಳು ಕಾಮನ್ ..ಒಬ್ಬರ ಮೇಲೆ ಒಬ್ಬರು ನಾಲಿಗೆಯನ್ನು ಹರಿಬಿಟ್ಟಿರುತ್ತಾರೆ..ಕಿತ್ತಾಟಗಳು ಕೆಸರೆರಚಾಟಗಳು ಹೊಸದೇನಲ್ಲ… ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಕೂಡ ಆಗಿದ್ದು ಇದೆ… ಮಂಡ್ಯ ಲೋಕಸಭಾ ಸಾಕಷ್ಟು ಕುತೂಹಲವನ್ನು ಕೆರಳಿಸಿತ್ತು.. ನಿಖಿಲ್ ಮತ್ತು ಅಭಿ ಕುಚುಕು ಗೆಳೆಯರ ರೀತಿಯಲ್ಲಿ ಇದ್ದರು.. ಇದೀಗ ಶತ್ರುಗಳ ರೀತಿಯಲ್ಲಿ ಆಗಿ ಬಿಟ್ಟಿದ್ದಾರೆ.. ಮಂಡ್ಯ ಅಖಾಡದಲ್ಲಿ ಇಬ್ಬರು ಎದುರಾಳಿಗಳಾಗಿದ್ದರು.
ಅಭಿಷೇಕ್ ಅಂಬರೀಶ್ ಅವರ ಮೊದಲನೆ ಸಿನಿಮಾ ಅಮರ್ ನಾಳೆ ಬಿಡುಗಡೆ ಆಗುತ್ತಿದೆ. ಈ ಚಿತ್ರದ ಯಶಸ್ಸಿಗೆ ನಿಖಿಲ್ ಕುಮಾರಸ್ವಾಮಿ ವಿಶ್ ಮಾಡಿದ್ದಾರೆ. ರಾಜಕೀಯಕ್ಕಿಂತ ನನಗೆ ಸಂಬಂಧ ಬಹಳ ಮುಖ್ಯ. ನಾನು ಸಂಬಂಧಗಳಿಗೆ ಗೌರವ ಕೊಡುತ್ತೇನೆ. ಸುಮಕ್ಕ ಅವರ ಗೆಲುವಿಗೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಮಂಡ್ಯ ಅಭಿವೃದ್ಧಿಗೆ ನಾನು ಕೈ ಜೋಡಿಸುತ್ತೇನೆ. ನನ್ನ ಸೋಲಿಗೆ ಯಾರೂ ಕಾರಣಕರ್ತರಲ್ಲ. ನನ್ನ ಸೋಲಿಗೆ ನಾನೇ ಕಾರಣ ಎಂದು ನಿಖಿಲ್ ಕುಮಾರಸ್ವಾಮಿ ಬರೆದುಕೊಂಡಿದ್ದಾರೆ. ಒಟ್ಟಾರೆಯಾಗಿ ನಿಖಿಲ್ ಸೋತಿದ್ದರೂ ಕೂಡ ತನ್ನ ಎದುರಾಳಿಗೆ ಶುಭಾಷಯ ತಿಳಿಸಿದ್ದಾರೆ.. ಅದೇ ರೀತಿ ಅಮರ್ ಸಿನಿಮಾಗೂ ಶುಭಾಯಷ ತಿಳಿಸಿದ್ದಾರೆ. ಜಗಳಗಳನ್ನು ಮರೆತು ಮತ್ತೆ ಒಂದಾಗ್ತಾರ ಎನ್ನುವುದನ್ನು ಕಾದು ನೋಡಬೇಕಿದೆ.
Comments