ಅಂಬಿ ಕೊಟ್ಟ ಮಾತನ್ನ ಸುಮಲತಾ ಈಡೇರಿಸುತ್ತಾರಾ..? ಅಷ್ಟಕ್ಕೂ ಆ ಮಾತೇನು..?

28 May 2019 4:47 PM | General
688 Report

ಮಂಡ್ಯದ ಲೋಕಸಭಾ ಅಖಾಡದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದ ಸುಮಲತಾ ಸಂಸತ್ತನ್ನು ಪ್ರವೇಶ ಮಾಡಲಿದ್ದಾರೆ.. ಈ ಸಮಯದಲ್ಲಿ ಅವರಿಗೆ ನಾನಾ ಪರೀಕ್ಷೆಗಳು ಎದುರಾಗುತ್ತವೆ… ಆದರೆ ನಾಳೆ ರೆಬಲ್ ಸ್ಟಾರ್ ಅಂಬರೀಶ್ ಅವರ ಹುಟ್ಟುಹಬ್ಬವಿದೆ.. ಇದರ ಅಂಗವಾಗಿ ಅಭಿಮಾನಿಯೊಬ್ಬ ಹುಚ್ಚು ಅಭಿಮಾನವನ್ನು ಮೆರೆದಿದ್ದಾನೆ.. ಅಂಬರೀಷ್ ಹುಟ್ಟು ಹಬ್ಬದ ಪ್ರಯುಕ್ತ ಅವರ ಅಭಿಮಾನಿಯೊಬ್ಬ ತನ್ನ ಕೈ ಮೇಲೆ ಅಂಬರೀಶ್ ನಟಿಸಿರುವ ಸಿನಿಮಾದ ಹೆಸರುಗಳನ್ನು ಹರಿತವಾದ ಲೋಹದಿಂದ ಬರೆದುಕೊಂಡಿದ್ದಾನೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದ ಪ್ರಕಾಶ್ ಎಂಬುವವರು ಈ ರೀತಿಯ ಹುಚ್ಚು ಅಭಿಮಾನವನ್ನು ಪ್ರದರ್ಶನ ಮಾಡಿದ್ದಾರೆ.. ಪ್ರಕಾಶ್ ತಮ್ಮ ಕೈ ಮೇಲೆ ಅಂಬರೀಶ್, ಸುಮಲತಾ ಹಾಗೂ ಅಭಿ ಎಂದು ಬರೆದುಕೊಂಡಿರುವುದಲ್ಲದೇ ಅಂಬರೀಶ್ ಅವರ ನಟನೆಯ ಚಿತ್ರಗಳ ಹೆಸರನ್ನು ಕೂಡ ಬರೆದುಕೊಂಡಿದ್ದಾರೆ. ಅಂಬರೀಷ್ ಬದುಕಿದ್ದಾಗ ಒಂದು ದಿನ ನಿಮ್ಮೂರಿಗೆ ಭೇಟಿ ನೀಡಿ ನಿಮ್ಮ ಮನೆಗೆ ಬರುವೆ ಎಂದು ಹೇಳಿದ್ದರಂತೆ. ಆದರೆ ಅಭಿಮಾನಿಯ ಆಸೆ ಈಡೇರಿಸುವ ಮೊದಲೇ ರೆಬಲ್ ಸ್ಟಾರ್ ಅಂಬರೀಶ್ ಅವರು ಬಾರದ ಲೋಕಕ್ಕೆ ಪಯಣ ಬೆಳಸಿದ್ದಾರೆ.. ಸದ್ಯ ಅವರು ನಮ್ಮ ಜೊತೆ ಇಲ್ಲ…  ಅವರ ಕುಟುಂಬದವರಾದರು ನಮ್ಮ ಮನೆಗೆ ಬರಬೇಕೆಂದು ಅಂಬರೀಶ್ ಅಭಿಮಾನಿ ಪ್ರಕಾಶ್ ಒತ್ತಾಯಿಸುತ್ತಿದ್ದಾರೆ. ಸುಮಲತಾ ಅಂಬರೀಶ್ ಈ ವಿಷಯದ ಬಗ್ಗೆ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡಬೇಕಿದೆ… ಈ ರೀತಿಯ ಹುಚ್ಚು ಅಭಿಮಾನಿ ಸರಿಯಲ್ಲ ಎನ್ನುವುದು ಚಿತ್ರರಂಗದವರ ಅಭಿಪ್ರಾಯವಾಗಿದೆ.

Edited By

Manjula M

Reported By

Manjula M

Comments