ಚುನಾವಣೆಯಲ್ಲಿ ಗೆದ್ದು ಲೋಕಸಭೆಗೆ ಎಂಟ್ರಿ ಕೊಡಲಿದ್ದಾರೆ ಈ ಗ್ಲಾಮರಸ್ ಸದಸ್ಯೆ..!!

ಚಿತ್ರನಟ ನಟಿಯರು ರಾಜಕೀಯ ರಂಗಕ್ಕೆ ಎಂಟ್ರಿ ಕೊಡುವುದು ಕಾಮನ್ ಆಗಿ ಬಿಟ್ಟಿದೆ..ಸಿನಿಮಾ ರಂಗದ ಜೊತೆ ಜೊತೆಗೆ ರಾಜಕೀಯಕ್ಕೂ ಎಂಟ್ರಿ ಕೊಟ್ಟಿರೋ ಸಾಕಷ್ಟು ಸೆಲಬ್ರೆಟಿಗಳು ನಮ್ಮ ಕಣ್ಣ ಮುಂದೆಯೇ ಇದ್ದಾರೆ.. ಇದೀಗ ಚಿತ್ರನಟಿ ಹಾಗೂ ರಾಜಕಾರಣಿ ಮಿಮಿ ಚಕ್ರವರ್ತಿ ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಾರೆ. ತೃಣಮೂಲ ಕಾಂಗ್ರೆಸ್ ನಿಂದ ಜಾಧಪುರ್ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಿಮಿಗೆ ಇದೀಗ ಗೆಲುವು ಸಿಕ್ಕಿದೆ.
ಅಷ್ಟೆ ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಈಗ ಮಿಮಿ ಚಕ್ರವರ್ತಿ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಎಸ್.. ಅಷ್ಟೆ ಅಲ್ಲದೆ ಮಿಮಿ ಚಕ್ರವರ್ತಿಯು ಈ ಬಾರಿ ಲೋಕಸಭೆ ಪ್ರವೇಶ ಮಾಡುತ್ತಿರುವ ಗ್ಲಾಮರಸ್ ಸಂಸದೆ ಎಂದು ಹೇಳಲಾಗುತ್ತಿದೆ. ರಾಜಕೀಯದ ಜೊತೆ ಜೊತೆಯಲ್ಲೆ ಮಿಮಿ ಚಕ್ರವರ್ತಿ ಅಭಿನಯದ ಎರಡು ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿವೆ. ಮಿಮಿ ಸುಮಾರು 3 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ ಎನ್ನಲಾಗಿದೆ. ಈ ಬಾರಿ ಲೋಕಸಭೆಗೆ ಈ ಗ್ಲಾಮರಸ್ ಚೆಲುವೆ ಎಂಟ್ರಿ ಕೊಟ್ಟು ಸದ್ದು ಮಾಡಲಿದ್ದಾರೆ ಅನ್ನೋದೇ ವಿಶೇಷ..
Comments