ಜೋಡೆತ್ತುಗಳ ಅಬ್ಬರಕ್ಕೆ ನಲುಗಿದ ಜಾಗ್ವಾರ್ ನಾಯಕ…!! ಜೋಡೆತ್ತುಗಳಿಗೆ ಧನ್ಯವಾದ ತಿಳಿಸಿದ ಬಿಎಸ್ ವೈ..!!!
ಲೋಕಸಮರ ಶುರುವಾದ ಪ್ರಾರಂಭದ ಹೊತ್ತಿಯಲ್ಲಿಯೇ ಸ್ಯಾಂಡಲ್ ವುಡ್ ನ ಸ್ಟಾರ್ ಗಳು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು.. ಅದರಲ್ಲಿ ಯಶ್ ಮತ್ತು ದರ್ಶನ್ ಮಾತ್ರ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು…ಮಂಡ್ಯ ಅಖಾಡದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಅಖಾಡಕ್ಕೆ ಇಳಿದಿದ್ದರು.. ಅವರ ವಿರುದ್ದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಖಾಡಕ್ಕೆ ಇಳಿದಿದ್ದರು. ಸುಮಲತಾ ಪರವಾಗಿ ಸ್ಯಾಂಡಲ್ ವುಡ್ ನ ಸ್ಟಾರ್ಸ್ಗಳಾದ ದರ್ಶನ್ ಮತ್ತು ಯಶ್ ಕ್ಯಾಂಪೇನ್ ಮಾಡಿದ್ದರು.. ಅದೇ ರೀತಿಯಾಗಿ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರೋಧವನ್ನು ಕಟ್ಟಿಕೊಂಡಿದ್ದರು..
ಯಶ್ ಮತ್ತು ದರ್ಶನ್ ಜೋಡೆತ್ತುಗಳು ಅಲ್ಲ.. ಅವರು ಕಳ್ಳೆತ್ತುಗಳು ಎಂದು ಕುಮಾರಸ್ವಾಮಿ ಮಾತಿನ ಭರದಲ್ಲಿ ಹೇಳಿದ್ದರು..… ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ದರ್ಶನ್ ಮತ್ತು ಯಶ್ ಜೋಡೆತ್ತುಗಳ ರೀತಿಯಲ್ಲೆ ಸುಮಲತಾ ಪರ ಯಶ್ ಪ್ರಚಾರ ಮಾಡಿದ್ದರು… ಇದೀಗ ಆ ಪ್ರಚಾರಕ್ಕೆ ಒಂದು ಬೆಲೆ ಸಿಕ್ಕಿದಂತಾಗಿದೆ.. ಸುಮಲತಾ ಪರ ಪ್ರಚಾರ ಮಾಡಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ದರ್ಶನ್ ಮತ್ತು ಯಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ… ಒಟ್ಟಾರೆಯಾಗಿ ಮಂಡ್ಯದ ಜನತೆ ಸ್ವಾಭಿಮಾನಿಗಳು ಎಂಬುದನ್ನು ಮತ್ತೊಮ್ಮೆ ಸಾಭೀತು ಪಡಿಸಿದ್ದಾರೆ.. ಹೀಗಾಗಲೇ ಮಂಡ್ಯದಲ್ಲಿ ಸುಮಲತಾ ಗೆಲುವು ಸಾಧಿಸಿದ್ದಾರೆ.. ಮಂಡ್ಯ ಸ್ವಾಭಿಮಾನಿಗಳ ಜಿಲ್ಲೆ ಎಂಬುದನ್ನು ಮತ್ತೊಮ್ಮೆ ಸಾಭೀತು ಮಾಡಿಕೊಂಡಿದೆ
Comments