ಲೋಕಸಮರದ ಫಲಿತಾಂಶದ ಹಿನ್ನಲೆ: ಮಂಡ್ಯದಲ್ಲಿ ಲಘು ಲಾಠಿ ಪ್ರಹಾರ
ಇಷ್ಟು ದಿನ ಕಾತುರದಿಂದ ಕಾಯುತ್ತಿದ್ದ ಫಲಿತಾಂಶಕ್ಕೆ ತೆರೆ ಬೀಳುತ್ತಿದೆ.. ಅದರಲ್ಲೂ ಮಂಡ್ಯ ಅಖಾಡದಲ್ಲಿ ಮಾತ್ರ ಸಿಕ್ಕಾಪಟ್ಟೆ ಕಾವು ಹಾಗೇಯೇ ಮುಂದುವರೆದುಕೋಮಡು ಹೋಗಿದೆ.. ಹೀಗಾಗಲೇ ಸುಮಲತಾ ಸುಮಾರು 50 ಸಾವಿರ ಲೀಡ್ ಗಳಿಂದ ಮುನ್ನಡೆ ಸಾಧಿಸಿದ್ದಾರೆ.. ನಿಖಿಲ್ ಗೆ ಸೋಲು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ…
ಫಲಿತಾಂಶ ಹೊರಬರುತ್ತಿದ್ದಂತೆ ಮಂಡ್ಯದಲ್ಲಿ ಈಗಾಗಲೇ ಲಘು ಲಾಠಿ ಪ್ರಹಾರ ನಡೆಯುತ್ತಿದೆ.. ಸುಮಲತಾ ಬೆಂಬಲಿಗರು ಮತ್ತು ನಿಖಿಲ್ ಬೆಂಬಲಿಗರ ನಡುವೆ ಮಾರಮಾರಿ ಶುರುವಾಗಿದೆ ಎನ್ನಲಾಗುತ್ತಿದೆ.. ಇನ್ನೂ ಫಲಿತಾಂಶ ಪ್ರಕಟವಾಗೇ ಇಲ್ಲ.. ಆಗಲೇ ಮಂಡ್ಯದಲ್ಲಿ ಗಲಾಟೆ ಶುರುವಾಗಿ ಬಿಟ್ಟಿದೆ.. ಹೀಗೆ ಆಗುವುದು ಎಂದೇ ಊಹಿಸಿ ಹೆಚ್ಚುವರಿ ಬಿಗಿಭದ್ರತೆಯನ್ನು ಮಂಡ್ಯಗೆ ಒದಗಿಸಿದೆ.. ಎಲ್ಲಿಯೂ ಕೂಡ ಗಲಾಟೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ.. ಇನ್ನೂ ಫೈನಲ್ ಆಗಿ ಫಲಿತಾಂಶ ಬಂದಮೇಲೆ ಎಲ್ಲವೂ ತಿಳಿಯಲಿದೆ.. ಆದರೆ ಅದಕ್ಕೂ ಮೊದಲೇ ಜಗಳ ಶುರುವಾಗಿ ಬಿಟ್ಟಿದೆ.
Comments