ಲೋಕಸಮರ ದ ಬಗ್ಗೆ ಪ್ರಕಾಶ್ ರೈ ಹೇಳಿದ್ದೇನು ಗೊತ್ತಾ..?

ಲೋಕಸಮರದ ಫಲಿತಾಂಶ ಹೊರ ಬಂದ ಮೇಲೆ ರಾಜ್ಯ ರಾಜಕರಾಣದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ.. ಸಾಕಷ್ಟು ಶಾಸಕರು ರಾಜೀನಾಮೆ ಕೊಡ್ತೀನಿ ಅಂದಿದ್ದರು… ಆದರೆ ಈಗ ಯಾರು ರಾಜೀನಾಮೆ ಕೊಡ್ತಾರ, ಬಿಡ್ತಾರೋ ಗೊತ್ತಿಲ್ಲ… ಲೋಕಸಭೆ ಚುನಾವಣೆಯ ಫಲಿತಾಂಶ ಒಂದೊಂದಾಗಿಯೇ ಹೊರಬೀಳುತ್ತಿದ್ದು, ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ನಟ ಪ್ರಕಾಶ್ ರೈ ತೀವ್ರ ನಿರಾಸೆಯನ್ನು ಅನುಭವಿಸಿದ್ದಾರೆ..
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದ ಪ್ರಕಾಶ್ ರೈ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. ಫಲಿತಾಂಶದ ಕುರಿತು ಟ್ವೀಟ್ ಮಾಡಿರುವ ಪ್ರಕಾಶ್ ರೈ, ಈ ಫಲಿತಾಂಶ ನನ್ನ ಕಪಾಳಕ್ಕೆ ಜೋರಾಗಿ ಬಾರಿಸಿದಂತಾಗಿದೆ. ಅಸೂಯೆ, ಟ್ರೋಲ್ ಗಳು ಮಾತ್ರ ನನ್ನ ದಾರಿಗೆ ಬಂದಿವೆ. ಆದರೆ ನಾನು ನನ್ನ ಜಾಗದಲ್ಲೇ ನಿಲ್ಲುತ್ತೇನೆ. ಸೆಕ್ಯುಲರ್ ಭಾರತಕ್ಕಾಗಿ ನನ್ನ ಹೋರಾಟವನ್ನು ಮುಂದುವರೆಸುತ್ತೇನೆ. ಮುಂದೆ ಕಠಿಣ ಪಯಣವಿದೆ. ಅದಕ್ಕೆ ಇದು ಪ್ರಾರಂಭ ಮಾತ್ರ. ನನ್ನ ಜೊತೆಗೆ ನಿಂತ ಎಲ್ಲರಿಗೂ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ. ಒಟ್ಟಾರೆಯಾಗಿ ರಾಜ್ಯ ರಾಜಕಾರಣದಲ್ಲಿ ಲೋಕಸಮರದ ಫಲಿತಾಂಶವು ಮಹತ್ತರ ಬದಲಾವಣೆಯನ್ನು ತರುವುದರಲ್ಲಿ ನೋ ಡೌಟ್ ಎನ್ನಬಹುದು..
Comments