ಜೋಡೆತ್ತುಗಳ ಫಲ ಫಲಿಸಿತ್ತಾ..!! ಸುಮಲತಾಗೆ ಗೆಲುವು ಖಚಿತ..!!!
ಲೋಕಸಮರ ಶುರುವಾದ ಪ್ರಾರಂಭದ ಹೊತ್ತಿಯಲ್ಲಿಯೇ ಸ್ಯಾಂಡಲ್ ವುಡ್ ನ ಸ್ಟಾರ್ ಗಳು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು.. ಅದರಲ್ಲಿ ಯಶ್ ಮತ್ತು ದರ್ಶನ್ ಮಾತ್ರ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು…ಮಂಡ್ಯ ಅಖಾಡದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಅಖಾಡಕ್ಕೆ ಇಳಿದಿದ್ದರು.. ಅವರ ವಿರುದ್ದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಖಾಡಕ್ಕೆ ಇಳಿದಿದ್ದರು. ಸುಮಲತಾ ಪರವಾಗಿ ಸ್ಯಾಂಡಲ್ ವುಡ್ ನ ಸ್ಟಾರ್ಸ್ಗಳಾದ ದರ್ಶನ್ ಮತ್ತು ಯಶ್ ಕ್ಯಾಂಪೇನ್ ಮಾಡಿದ್ದರು.. ಅದೇ ರೀತಿಯಾಗಿ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ವಿರೋಧವನ್ನು ಕಟ್ಟಿಕೊಂಡಿದ್ದರು..
ಅಷ್ಟೆ ಅಲ್ಲದೆ ರೈತರ ಸಾಲಮನ್ನಾ ಮಾಡುವುದು ಬೇಡ ರೈತರ ಬೆಳೆಗಳಿಗೆ ಬೆಂಬಲ ನೀಡಿ ಎಂಬ ದರ್ಶನ ಹೇಳಿಕೆಗೆ ರಾಜ್ಯದಾದ್ಯಂತ ರೈತ ಮುಖಂಡರ ತೀವ್ರ ವಿರೋಧ ವ್ಯಕ್ತವಾಗಿದೆ. ದರ್ಶನ ಹೇಳಿಕೆಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿರುವ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ರೈತರಿಗೆ ಸಾಲ ಮನ್ನಾ ಬೇಡ ಎನ್ನುವ ನೀವು ನಿಮ್ಮ ಚಿತ್ರಕ್ಕೆ ಅರ್ಧ ಸಂಭಾವನೆ ತೆಗೆದುಕೊಳ್ಳಿ ನೋಡೋಣ ಎಂದು ಸವಾಲನ್ನು ಕೂಡ ಹಾಕಿದ್ದರು.. ಎಂದು ಲೋಕಸಭಾದ ಫಲಿತಾಂಶ ಹೊರ ಬಂದ ಹಿನ್ನಲೆಯಲ್ಲಿ ಡಿ ಬಾಸ್ ,ಮತ್ತು ಯಶ್ ಮೇಲಿದ್ದ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ… ಸುಮಲತಾ ಗೆಲುವು ಈಗಾಗಲೇ ಸಾಕಷ್ಟು ಖಚಿತವಾಗಿದೆ.. ಇದೇ ಹಿನ್ನಲೆಯಲ್ಲಿ ಇಬ್ಬರು ಮಂಡ್ಯಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ..
Comments