ಟಿಕ್ ಟಾಕ್’ನಲ್ಲಿ ಫೇಮಸ್ ಆಗಿದ್ದವನು ಗುಂಡೇಟಿಗೆ ಬಲಿ..!!
ಇತ್ತಿಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಆ್ಯಪ್ ಎಂದರೆ ಅದು ಟಿಕ್ ಟ್ಯಾಕ್.. ಟಿಕ್ ಟ್ಯಾಕ್ನಿಂದಾಗಿ ಸಾಕಷ್ಟು ಕಲಾವಿದರು ಗುರುತಿಸಿಕೊಂಡಿದ್ದಾರೆ. ಇತ್ತಿಚಿಗೆ ಈ ಆ್ಯಪ್ ಅನ್ನು ಕೂಡ ಬ್ಯಾನ್ ಮಾಡಿದ್ದರು… ಆದರೆ ಮತ್ತೆ ಬ್ಯಾನ್ ರದ್ದು ಮಾಡಿದ್ದರು..ಸಾಕಷ್ಟು ಯುವ ಕಲಾವಿದರು ಟಿಕ್ ಟ್ಯಾಕ್ ನಿಂದಾನೆ ಗುರುತಿಸಿಕೊಂಡಿದ್ದಾರೆ. ಆದರೆ ಇದೀಗ ಟಿಕ್ ಟಾಕ್ ಮಾಡುತ್ತಿದ್ದ ಯುವಕನಿಗೆ ಗುಂಡಿಟ್ಟು ಸಾಯಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡಿದ್ದ 24 ವರ್ಷದ ಮೋಹಿತ್ ಮೋರ್ ಅವರನ್ನು ಮೂವರು ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಟಿಕ್ ಟಾಕ್ ಮೂಲಕ ಅರ್ಧ ಮಿಲಿಯನ್ ಸಂಖ್ಯೆಯ ಫಾಲೋಯರ್ಸ್ ಗಳನ್ನು ಹೊಂದಿರುವ ಮೋಹಿತ್ ಅವರು ಫಿಟ್’ನೆಸ್ ಗೆ ಸಂಬಂಧ ಪಟ್ಟಂತೆ ನಿರಂತರವಾಗಿ ವಿಡಿಯೋ ಅಪ್ ಲೋಡ್ ಮಾಡುತ್ತಿದ್ದರು. ಮಂಗಳವಾರ ಸಂಜೆ ಐದು ಗಂಟೆ ವೇಳೆಗೆ ನಜಾಫ್ ಗಡದಲ್ಲಿ ಅವರು ಗೆಳೆಯನೊಂದಿಗೆ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಏಕಾಏಕಿ ಮೂರು ಜನ ದಾಳಿ ಮಾಡಿದ್ದು, ಸಿಸಿ ಟಿವಿಯಲ್ಲಿ ಇಡೀ ಘಟನೆ ದಾಖಲಾಗಿದೆ.ಒಟ್ಟಿನಲ್ಲಿ ಟಿಕ್ ಟಾಕ್ ನಲ್ಲಿ ಫೇಮಸ್ ಆಗಿದ್ದಂತಹ ಸದ್ಯ ಅಂತ್ಯವಾಗಿದೆ. ದಾಳಿ ಮಾಡುವ ಸಮಯದಲ್ಲಿ ಹೆಲ್ಮೆಟ್ ಧರಿಸಿದ್ದರಿಂದ ಮುಖಗಳು ಅಷ್ಟು ಸ್ಪಷ್ಟವಾಗಿ ತಿಳಿದಿಲ್ಲ… ಇದೀಗ ಪೊಲೀಸರು ಕೇಸನ್ನು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.
Comments