ಹೊಸ ಸಿನಿಮಾ ಒಪ್ಪಿಕೊಂಡ ನಿಖಿಲ್ ಕುಮಾರಸ್ವಾಮಿ..!!!
ಮಂಡ್ಯ ಲೋಕಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಅಖಾಡಕ್ಕೆ ಇಳಿದು ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಅವರಿಗೆ ಟಫ್ ಪೈಟ್ ಕೊಟ್ಟಿದ್ದರು.. ರಾಜಕೀಯಕ್ಕೆ ಎಂಟ್ರಿ ಕೊಟ್ಟ ಮೇಲೆ ಮತ್ತೆ ನಿಖಿಲ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಡ್ತಾರ ಎಂಬ ಮಾತುಗಳು ಕೇಳಿ ಬರುತ್ತಿದ್ದವು… ಇದೀಗ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಿಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಮತ್ತೆ ಬಣ್ಣ ಹಚ್ಚಲು ಸಿದ್ದರಾಗಿದ್ದಾರೆ.
ಇದೀಗ ನಾನು ಮತ್ತೆ ಸಿನಿಮಾದಲ್ಲಿ ಖಂಡಿತಾ ಅಭಿನಯಿಸುವೆ ಎಂದಿದ್ದ ನಿಖಿಲ್ ಹೊಸ ಸಿನಿಮಾ ಕೆಲಸದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ನಿಖಿಲ್ ರಜನೀಕಾಂತ್ ಅಭಿನಯದ 2.0 ಸಿನಿಮಾ ನಿರ್ಮಾಪಕರ ಜತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಸಾಕಷ್ಟು ಬಾರಿ ಕೇಳಿ ಬಂದಿತ್ತು. ಆದರೆ ಆ ಸುದ್ದಿ ಈಗ ನಿಜವಾಗುತ್ತಿದೆ. ಪ್ರೊಡಕ್ಷನ್ ಹೌಸ್ ನವರೊಂದಿಗೆ ಹೊಸ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿಖಿಲ್ ಬ್ಯುಸಿಯಾಗಿದ್ದಾರಂತೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಮಾಹಿತಿ ಕೊಡಲಿದ್ದಾರೆ. ಆದರೆ ಸಿನಿಮಾದ ಬಗ್ಗೆ ಎಷ್ಟೆ ಆಸಕ್ತಿ ಇದ್ದರೂ ನಿಖಿಲ್ಗೆ ಮೇ 23 ರಂದು ಬರುವ ಚುನಾವಣೆಯ ಫಲಿತಾಂಶದ ಬಗ್ಗೆ ಹೆಚ್ಚು ಆಸಕ್ತಿ.. ಚುನಾವಣೆಯ ಫಲಿತಾಂಶ ಏನೇ ಆದರೂ ಪರವಾಗಿಲ್ಲ.. ನಾನು ಮಂಡ್ಯ ಜನರ ಸೇವೆ ಯಾವಾಗಲೂ ಮಾಡುತ್ತೇನೆ ಎಂದು ನಿಖಿಲ್ ಹಲವು ಬಾರಿ ತಿಳಿಸಿದ್ದಾರೆ.
Comments