ಈ ಬಾರಿ ಸುಮಲತಾ ನೇ ಗೆಲ್ಲೋದಂತೆ..!! ಬಾಲಕನ ಮೈ ಮೇಲೆ ಬಂದ ದೇವರು ಹೇಳಿದ್ದೇನು..? ವಿಡಿಯೋ ವೈರಲ್

ಇಡೀ ರಾಜ್ಯ ರಾಜಕಾರಣದಲ್ಲಿ ಮಂಡ್ಯ ಸುದ್ದಿ ಮಾಡಿದಷ್ಟು ಬೇರೆ ಯಾವ ಜಿಲ್ಲೆಯೂ ಕೂಡ ಸುದ್ದಿ ಮಾಡಲಿಲ್ಲ ಎನಿಸುತ್ತದೆ..ಚುನಾವಣೆಯ ಮುನ್ನ ಎಷ್ಟು ಸುದ್ದಿ ಮಾಡಿತ್ತೋ ಅದಕ್ಕಿಂತ ಹೆಚ್ಚು ಚುನಾವಣೆಯ ನಂತರ ಸುದ್ದಿ ಮಾಡುತ್ತಿದೆ.. ಮಂಡ್ಯದಲ್ಲಿ ದೋಸ್ತಿ ಅಭ್ಯರ್ಥಿಯಾಗಿ ನಿಖಿಲ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಕಣಕ್ಕೆ ಇಳಿದು ಭರ್ಜರಿ ಕ್ಯಾಂಪೇನ್ ಶುರು ಮಾಡಿಕೊಂಡಿದ್ದರು..ಒಂದು ಸುಮಲತಾ ಪರ ಸ್ಟಾರ್ ನಾಯಕರು ಕ್ಯಾಂಪೇನ್ ಮಾಡಿದ್ರೆ ನಿಖಿಲ್ ಪರ ಸ್ಟಾರ್ ರಾಜಕಾರಣಿಗಳು ಕ್ಯಾಂಪೇನ್ ಮಾಡಿದ್ದರು..
ಮಂಡ್ಯದಲ್ಲಿ ನಿಖಿಲ್ ಮತ್ತು ಸುಮಲತಾ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು…ಮಂಡ್ಯ ಲೋಕಸಭಾ ಚುನಾವಣೆಯ ನಂತರ ಜಿದ್ದಾಜಿದ್ದಿನ ನಡುವೆ ಮಂಡ್ಯದ ಜನತೆ ಯಾರ ಕಡೆ ಒಲವು ತೋರಿದ್ದಾರೆ ಎಂಬುದು ಮೇ23 ರಂದು ತಿಳಿಯುತ್ತದೆ..ಆದರೆ ಕುಮಾರಸ್ವಾಮಿ ಯವರು ಗುಪ್ತಚರ ಮಾಹಿತಿಯನ್ನು ತರಿಸಿಕೊಂಡು ನೋಡಿದ್ದಾದರೂ ಕೂಡ ಪುತ್ರನ ಸೋಲಿನ ಬಗ್ಗೆ ಭಯ ಕಾಡುತ್ತಿದೆ ಎನ್ನಲಾಗುತ್ತಿದೆ.. ಆದರೆ ಸುಮಲತಾ ನೇ ಗೆಲ್ಲೋದು ಎಂಬುದು ಕೆಲವರ ವಾದವಾಗಿದೆ… ಇದೀಗ ಮಕ್ಕಳು ಆಟ ಆಡುವ ಸಮಯದಲ್ಲಿಯೂ ಕೂಡ ಸುಮಲತಾನೇ ಗೆಲ್ಲೋದು ಎಂದು ಹೇಳಿದ್ದಾರೆ. ಬಾಲಕನ ಮೈ ಮೇಲೆ ಬರುವ ದೇವರೊಂದು ಸುಮಲತಾ ನೇ ಗೆಲ್ಲೋದು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ನಿಜವಾಗಿಯೂ ಆ ಬಾಲಕನ ಮೈ ಮೇಲೆ ದೇವರು ಬಂದಿಲ್ಲ… ಬದಲಿಗೆ ಮಕ್ಕಳು ಸುಮ್ಮನೆ ಈ ರೀತಿ ಆಟವಾಡಿದ್ದಾರೆ ಅಷ್ಟೆ..
Comments