ಮೈತ್ರಿ ಸರ್ಕಾರದಿಂದ ಎಷ್ಟು ಕೋಟಿ ರೈತರ ಸಾಲ ಮನ್ನಾ ಆಗಿದೆ..? ಈ ಬಗ್ಗೆ ರೈತರು ಹೇಳಿದ್ದೇನು..?

ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕುಮಾರಸ್ವಾಮಿಯವರು ನಾನು ಸಿಎಂ ಆಗಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ ಸಾಲವನ್ನು ಮನ್ನಾ ಮಾಡುತ್ತೇನೆ ಎಂದಿದ್ದರು.. ಆದರೆ ಅವರು ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆಯುತ್ತಾ ಇದ್ದರೂ ಕೂಡ ಸಾಲಮನ್ನಾ ಎಂಬುದು ಇನ್ನೂ ಭರವಸೆಯಾಗಿಯೇ ಉಳಿದಿದೆ. ಪೂರ್ಣವಾಗಿ ರೈತರ ಸಾಲ ಮನ್ನಾ ಆಗಿಲ್ಲ ಎಂಬ ಆರೋಪಗಳು ರೈತರಿಂದ ಮತ್ತು ಬಿಜೆಪಿಯವರಿಂದ ಕೇಳಿ ಬರುತ್ತಲೇ ಇದೆ..
ಇನ್ನು ಸಿಎಂ ಘೋಷಣೆ ಮಾಡಿದ ಸಾಲ ಮನ್ನಾ ಮೊತ್ತ 44ಸಾವಿರ ಕೋಟಿ ರೂ. ಆಗಿದ್ದು, ಸಹಕಾರಿ ಸಂಘಗಳ ಸಾಲ ಮನ್ನಾಗೆ 9,448.61 ಕೋಟಿ ರೂ. ಹಣದ ಅಗತ್ಯವಿದೆ. ಇಲ್ಲಿಯವರೆಗೆ ಸಹಕಾರಿ ಸಂಘಗಳಲ್ಲಿ ರೈತರ 2,630 ಕೋಟಿ ರೂ. ಸಾಲ ಮನ್ನಾ ಆಗಿದ್ದು, ವಾಣಿಜ್ಯ ಬ್ಯಾಂಕ್ ಗಳಲ್ಲಿ 2,800 ರೂ. ಮನ್ನಾ ಆಗಿದೆ. ಸಾಲ ಮನ್ನಾಗೆ ರಾಜ್ಯ ಸರ್ಕಾರ ಒಟ್ಟು 5,430 ಕೋಟಿ ರೂ. ಹಣವನ್ನು ವಿನಿಯೋಗಿಸಿದೆ. ಆದರೆ ಇನ್ನೂ ರೈತರ ಸಾಲ ಆಗಿಲ್ಲ ಎಂಬುದು ರೈತರ ಆರೋಪವಾಗಿದೆ.. ಒಂದು ವರ್ಷ ಆದರೂ ಇನ್ನು ಸಾಲ ಮನ್ನಾ ಆಗಿಲ್ಲ.. ಆದರೆ ಮಾತನಾಡುವಾಗಲೆಲ್ಲಾ ನಾನು ರೈತರ ಪರ ಎನ್ನುತ್ತಿರುತ್ತಾರೆ ಎಂದು ಕುಮಾರಸ್ವಾಮಿಯವರ ವಿರುದ್ದ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Comments