ರಾಜ್ಯ ಸರ್ಕಾರದಿಂದ ಸಿಕ್ತು ಗುಡ್’ನ್ಯೂಸ್..!! ಇದರಲ್ಲಿ ನಿಮ್ಮ ಮಕ್ಕಳು ಇರಬಹುದು..?
ರಾಜ್ಯ ಸರ್ಕಾರವು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದು ಎಲ್ಲದರಲ್ಲಿಯೂ ಕೂಡ ಸೈ ಎನಿಸಿಕೊಂಡಿದೆ. ಇದೀಗ ಮತ್ತೊಂದು ಮತ್ತೊಂದು ಗುಡ್ ನ್ಯೂಸ್ ಅನ್ನು ರಾಜ್ಯ ಸರ್ಕಾರ ತಿಳಿಸಿದೆ.. ಮಕ್ಕಳಿಗೆ ಸ್ಕೂಲ್ ಗೆ ಹೋಗೋದೆ ಒಂದು ದೊಡ್ಡ ಚಿಂತೆ… ಇನ್ನೂ ಅದರ ಜೊತೆಗೆ ಮಣಬಾರವಾದ ಬ್ಯಾಗ್ ಬೇರೆ.. ಬೆನ್ನು ಮೇಲೆ ಏರಿಕೊಂಡು ಹೋಗುತ್ತಿದ್ದಾರೆ, ಮಕ್ಕಳ ಮುಖ ನೆಲ ನೋಡುವಷ್ಟೆ ಬೆನ್ನು ಬಾಗಿರುತ್ತದೆ… ಶಾಲಾ ಬ್ಯಾಗ್ ಹೊರೆ ಇಳಿಸಲು ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದ್ದು, ಸದ್ಯದಲ್ಲೇ ಅಧಿಕೃತ ಆದೇಶವನ್ನು ಶಿಕ್ಷಣ ಇಲಾಖೆ ಹೊರಡಿಸಲಿದೆ ಎನ್ನಲಾಗಿದೆ.
2019 ಏಪ್ರಿಲ್ 16 ರಂದು ನಡೆದಿದ್ದ ಸಭೆಯಲ್ಲಿ ಬ್ಯಾಗ್ ತೂಕ ವಿದ್ಯಾರ್ಥಿಯ ದೇಹದ ತೂಕದ ಶೇ 10 ನ್ನು ಮೀರದಂತಿರಬೇಕು ಅನ್ನೋ ತೀರ್ಮಾನಕ್ಕೆ ಬಂದಿತ್ತು ಎನ್ನಲಾಗಿದೆ. ಹೀಗಾಗಿ ಒಂದರಿಂದ ಎರಡನೇ ತರಗತಿ ಮಕ್ಕಳಿಗೆ 1.5ಕೆ.ಜಿ ಯಿಂದ 2 ಕೆ.ಜಿ , ಮೂರರಿಂದ ಐದನೇ ತರಗತಿ ಮಕ್ಕಳಿಗೆ- 2 ರಿಂದ 3 ಕೆ.ಜಿ, ಆರರಿಂದ ಎಂಟನೇ ತರಗತಿ ಮಕ್ಕಳಿಗೆ 3 ರಿಂದ 4 ಕೆ.ಜಿ, ಒಂಬತ್ತರಿಂದ ಹತ್ತನೇ ತರಗತಿ ಮಕ್ಕಳಿಗೆ 4 ರಿಂದ 5 ಕೆ.ಜಿ ತೂಕದ ಬ್ಯಾಗ್ ಇರಬೇಕು ಎನ್ನುವುದರ ಬಗ್ಗೆ ಸದ್ಯದಲ್ಲೇ ಸರ್ಕಾರ ಆದೇಶ ಹೊರಡಿಸಲಿದೆಯಂತೆ. ಇನ್ನು ತಿಂಗಳ ಮೂರನೇ ಶನಿವಾರ ಬ್ಯಾಗ ರಹಿತ ದಿನವನ್ನಾಗಿ ಘೋಷಣೆ ಮಾಡಲಾಗುವುದು ಎನ್ನಲಾಗಿದ್ದು, ಇದಲ್ಲದೇ ಮೂರನೇ ಶನಿವಾರ ಶೈಕ್ಷಣಿಕ , ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಬೇಕು ಅನ್ನೋ ತೀರ್ಮಾನಕ್ಕೆ ಕೂಡ ಶಿಕ್ಷಣ ಇಲಾಖೆ ಮುಂದಾಗಿದೆಯಂತೆ. ಒಟ್ಟಾರೆಯಾಗಿ ಇದರಿಂದ ಮಕ್ಕಳು ಸ್ವಲ್ಪ ಮಟ್ಟಿಗೆ ಖುಷಿ ಪಟ್ಟಿದ್ದಾರೆ… ಸದ್ಯ ಒಂದು ದಿನ ಬ್ಯಾಗ್ ಇಲ್ಲದೆ ಸ್ಕೂಲಿಗೆ ಹೋದರೆ ಮಕ್ಕಳು ಎಷ್ಟು ಖುಷಿ ಪಡುತ್ತಾರೆ ಅಲ್ವ..
Comments