ಎಸ್ ಎಸ್ ಎಲ್ ಸಿ ಫಲಿತಾಂಶ..!! ಯಾವ ಜಿಲ್ಲೆ ಫಸ್ಟ್, ಯಾವ ಜಿಲ್ಲೆ ಲಾಸ್ಟ್..!!!
ಇದೀಗ 2018-2019 ನೇ ಸಾಲಿನ ರಾಜ್ಯ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟವಾಗಿದೆ... ಕೆಲವೇ ನಿಮಿಷಗಳ ಹಿಂದೆ ನಡೆದಿರುವಂತಹ ಮಾಧ್ಯಮಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ ಆರ್ ಉಮಾಶಂಕರ್ ಮಾಹಿತಿ ಹಾಗೂ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ. ಸುಮಂಗಲ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಹೆಣ್ಣು ಮಕ್ಕಳೇ ಮೇಲು ಗೈ ಸಾಧಿಸಿದ್ದಾರೆ. ಇನ್ನು ಈ ಬಾರಿಯ ಫಲಿತಾಂಶದಲ್ಲಿ ಮೊದಲ ಸ್ಥಾನವನ್ನು ಹಾಸನ ಜಿಲ್ಲೆ ಪಡೆದುಕೊಂಡಿದೆ. ಕೊನೆ ಸ್ಥಾನವನ್ನು ಯಾದಗಿರಿ ಜಿಲ್ಲೆ ಪಡೆದುಕೊಂಡಿದೆ. ಒಟ್ಟು ಶೇ 73.30 ರಷ್ಟು ಫಲಿತಾಂಶ ಬಂದಿದೆ. ಮಾರ್ಚ್ 21ರಿಂದ ಏಪ್ರಿಲ್ 4ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆದಿತ್ತು.2,847 ಪರೀಕ್ಷಾ ಕೇಂದ್ರದಲ್ಲಿ ಒಟ್ಟು 8,41,666 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. ಈ ಬಾರಿ ಬಾಲಕರು ಶೇ 68.46 ಪಾಸಾಗಿದ್ದು, ಬಾಲಕಿಯರು ಶೇ 68.46 ಪಾಸಾಗಿದ್ದಾರೆ. ಪೇಲಾಗಿರುವ ಮಕ್ಕಳಿಗೆ ಮತ್ತೆ ಯಾವಾಗ ರೀ ಎಕ್ಸಾಂ ಮಾಡುತ್ತಾರೆ ಎಂಬುದನ್ನು ಆದಷ್ಟು ಬೇಗ ತಿಳಿಸುತ್ತೇವೆ ಎಂದಿದ್ದಾರೆ.
Comments