ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಭವಿಷ್ಯ ಮೇ 2 ರಂದು ನಿರ್ಧಾರ.....
ಲೋಕಸಭೆ ಚುನಾವಣೆ ಫಲಿತಾಂಶ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಒಂದೇ ತಿಂಗಳಲ್ಲಿ ಪ್ರಕಟವಾಗುತ್ತದೆ. ಈಗಾಗಲೇ ಲೋಕಸಭೆ ಚುನಾವಣೆ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳಿಗೆ ರಿಸಲ್ಟ್ ಏನಾಗಲಿದೆ ಎಂಬ ಆತಂಕದಲ್ಲಿದ್ದರೇ ಇತ್ತ ಹತ್ತನೇ ತರಗತಿ ವಿದ್ಯಾರ್ಥಿಗಳು ತಾವು ಬರೆದಿರುವ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಲೋಕಸಭೆ ಅಭ್ಯರ್ಥಿಗಳ ರಿಸಲ್ಟ್ ಬರೋಕೆ ಇನ್ನು ಮೇ.23 ರ ತನಕ ಕಾಯಬೇಕು.
ಆದರೆ ಅದಕ್ಕೂ ಮುಂಚೆ ಪರೀಕ್ಷೆ ಬರೆದಿರುವ ಹತ್ತನೇ ತರಗತಿ ವಿದ್ಯಾರ್ಥಿಗಳ ಭವಿಷ್ಯ ಮೇ 2 ರಂದು ನಿರ್ಧಾರವಾಗಲಿದೆ.ಮೇ 2 ರಂದು ಎಸ್ಎಸ್ಎಲ್’ಸಿ ಪರೀಕ್ಷೆ ಫಲಿತಾಂಶ ಹೊರ ಬೀಳಲಿದೆ. ಮೇ 3ರಂದು ಆಯಾಯ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ಅವರು ಸೋಮವಾರ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 22ರಿಂದ ಏಪ್ರಿಲ್ 4ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆದಿತ್ತು. ಪ್ರಶ್ನೆ ಪತ್ರಿಕೆ ತಿದ್ದುವ ಕಾರ್ಯ ಪೂರ್ಣಗೊಂಡಿದ್ದು, ಮೇ 2ರಂದು ಪ್ರೌಢಶಿಕ್ಷಣ ಮಂಡಳಿ ವೆಬ್ ಸೈಟ್ ನಲ್ಲಿ ಪ್ರಕಟವಾಗಲಿದೆ.ಫಲಿತಾಂಶವನ್ನು ಈ ವೆಬ್ ಸೈಟ್ ನಲ್ಲಿ ಲಭ್ಯ; www.karresults.nic.in, www.kaceb.kar.nic.inಉತ್ತೀರ್ಣರಾದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶದ ಎಸ್ಸೆಎಂಎಸ್ ಪೋಷಕರಿಗೆ ಕಳುಹಿಸಲಾಗುವುದು ಎಂದು ವಿ.ಸುಮಂಗಲಾ ವಿವರಿಸಿದ್ದಾರೆ.
Comments