ಎಲ್ಲಾರು ಜಾತ್ರೆಯಲ್ಲಿ ತೇರನ್ನು ನೋಡುವಾಗ…!! ಅಯ್ಯೋ ಜನ ನೋಡುತ್ತಿದ್ದಿದ್ದು ತೇರನಲ್ಲ..!!! ಬದಲಿಗೆ ಗೋಲ್ಡನ್ ಬ್ರದರ್ಸ್ ನ..!!

27 Apr 2019 3:33 PM | General
449 Report

ಯಾರು ಯಾವಾಗ ಫೇಮಸ್ ಆಗುತ್ತಾರೋ ಗೊತ್ತಿಲ್ಲ.. ಸುಮ್ ಸುಮ್ನೆ ಇದ್ದಕ್ಕಿದ್ದಂತೆ ಫೇಮಸ್ ಆಗಿ ಬಿಡುತ್ತಾರೆ… ಸಾಮಾನ್ಯವಾಗಿ ಊರ ಜನ ಜಾತ್ರೆ ನಡಿತಿದೆ ಎಂದರೆ ಸಾಕು.. ಮಾಡೋ  ಕೆಲಸವನ್ನು ಬಿಟ್ಟು ಜಾತ್ರೆ ನೋಡಲು ಹೋಗುತ್ತಾರೆ…ಆದರೆ ನಾವ್ ಈಗ ಹೇಳೊ ಜಾತ್ರೆಲಿ ಜನ ಜಾತ್ರೆನಾ ಅಥವಾ ತೇರನ್ನೋ ನೋಡೋಕ್ಕೆ ಹೋಗಿರಲಿಲ್ಲ…ಬದಲಿಗೆ ಗೋಲ್ಡನ್ ಬ್ರದರ್ಸ್ನ ನೋಡಲು ಹೋಗಿದ್ದರು…

ಬಂಗಾರ ಅಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಮಹಿಳೆಯರಿಗಂತೂ ಬಿಡಿ ಇನ್ನಿಲ್ಲದ ಇಷ್ಟ. ಆದರೆ ಸಹೋದರಿಬ್ಬರು ಮೈ ಮೇಲೆ ಧರಿಸಿದ ಬಂಗಾರವನ್ನು ನೋಡಲು ಜನರು ಸೇರಿದ ಘಟನೆ ಚಿಕ್ಕಬಳ್ಳಾಪುರ ತಾಲೂಕು ಮಂಚನಬಲೆ ಗ್ರಾಮದಲ್ಲಿ ನಡೆದಿದೆ. ಏಳು ವರ್ಷಗಳಿಗೆ ಒಮ್ಮೆ ನಡೆಯುವ ಬೀರೇಶ್ವರ, ಸಿದ್ದೇಶ್ವರ ಆನೆ ದೇವರು ಮತ್ತು ಚೌಡೇಶ್ವರಿ ದೇವರುಗಳ ಜಾತ್ರಾ ಮಹೋತ್ಸವದಲ್ಲಿ ಈ ಇಬ್ಬರು ಸಹೋದರರು ಜಾತ್ರೆಯಲ್ಲಿ ಎಲ್ಲರ ಗಮನ ಸೆಳೆದರು. ಜಾತ್ರೆಲಿ ತೇರು, ದೇವರು ಫೇಮಸ್ ಆಗೋದನ್ನ ಕೇಳಿದ್ದೇವೆ.. ಆದರೆ ಇಲ್ಲಿ ಈ ಗೋಲ್ಡನ್ ಬ್ರದರ್ಸ್ ಪೇಮಸ್ ಆಗಿದ್ದಾರೆ. ಅದ್ಧೂರಿ ಜಾತ್ರಾ ಮಹೋತ್ಸವದಲ್ಲಿ ಬೆಂಗಳೂರಿನ ಆವಲಹಳ್ಳಿಯ ಸಹೋದರರಾದ ಮಹೇಶ್ ಮತ್ತು ಲೋಕೇಶ್ ಮೈ ಮೇಲೆ ಮುಕ್ಕಾಲು ಕೆಜಿ ತೂಕದ ಮಿರ ಮಿರ ಹೊಳೆಯುವ ಚೈನ್‍ಗಳನ್ನು ಕತ್ತಿಗೆ ಹಾಕಿಕೊಂಡು ಜಾತ್ರೆಗೆ ಬಂದಿದ್ದರು. ಗೋಲ್ಡನ್ ಬ್ರದರ್ಸ್‍ ನನ್ನು ಅಚ್ಚರಿಯಿಂದ ಕಂಡ ಜನ ಗೋಲ್ಡನ್ ಬಾಯ್ಸ್ ಹಾಗೂ ಬಂಗಾರದ ಹುಡುಗರು ಅಂತಲೇ ಮಾತನಾಡಿದರು. ಅಲ್ಲದೆ ಇಬ್ಬರು ಸಹೋದರರ ಜೊತೆ ಸೆಲ್ಫಿ ತೆಗೆದುಕೊಂಡು ಸಂತಸ ಪಟ್ಟರು.. ಚಿನ್ನದ ಬೆಲೆ ಗಗನಕ್ಕೆ ಏರಿದೆ.. ಆದರೂ ಇಷ್ಟು ತೂಕದ ಬಂಗಾರವನ್ನು ಮೈ ಮೇಲೆ ಹಾಕಿಕೊಂಡಿದ್ದಾರಲ್ಲ ಎಂದು ಜಾತ್ರೆಗೆ ಬಂದವರು ಮಾತನಾಡಿದ್ದಂತೂ ಸುಳ್ಳಲ್ಲ..

Edited By

Manjula M

Reported By

Manjula M

Comments