ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿಜಕ್ಕೂ ವಿವಾಹಿತನಾ…? ಫೋಟೋ ವೈರಲ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲವ್, ಮದುವೆ ವಿಚಾರವಾಗಿ ಆಗಾಗ್ಗ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ಮಹಿಳೆಯೊಬ್ಬಳನ್ನು ರಾಹುಲ್ ಗಾಂಧಿ ಮದುವೆಯಾಗಿದ್ದಾರೆ. ಅವರಿಬ್ಬರ ದಾಂಪತ್ಯಕ್ಕೂ ಎರಡು ಮಕ್ಕಳಿದ್ದಾರೆ. ಮಕ್ಕಳು ಲಂಡನ್ನಲ್ಲಿ ವಿದ್ಯಾಭ್ಯಾಸ ಮಾಡುತ್ತಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಚರ್ಚೆಯೇ ಆಗಿದೆ. ಅಷ್ಟೇ ಅಲ್ಲಾ ವಿಕಿಲೀಕ್ಸ್ ಸಂಸ್ಥೆ ರಾಹುಲ್'ಗೆ ಮದುವೆಯಾಗಿದೆ. ಮಕ್ಕಳು ಕೂಡ ಇದ್ದಾರೆ. ಮೊದಲ ಮಗುವಿಗೆ 14 ವರ್ಷ, ಎರಡನೇ ಮಗುವಿಗೆ 10 ವರ್ಷ. ಎಂದು ಬಯಲು ಮಾಡಿದೆ.. ಕೊಲಂಬಿಯಾದ ಮಹಿಳೆಯೊಂದಿಗೆ ರಾಹುಲ್ ಮದುವೆಯಾಗಿದ್ದಾರೆ. ಅದಕ್ಕೆ ಇಂಬು ಕೊಡುವಂತೆ ಫೋಟೋ ಕೂಡ ವೈರಲ್ ಆಗಿದೆ. ವಿಕಿಲೀಕ್ಸ್ ವರದಿಯಲ್ಲಿ ಏನಿದೆ ಗೊತ್ತಾ...
ರಾಹುಲ್ ಜೊತೆಗಿರುವ ಆಕೆಯ ಫೋಟೋ ವೈರಲ್ ಆಗುತ್ತಿದ್ದಂತೇ ನಿಜಕ್ಕೂ ರಾಹುಲ್ ಗಾಂಧಿಗೆ ಮದುವೆಯಾಗಿದ್ಯಾ ಎಂದು ಬಾಯಿ ಮೇಲೆ ಬೆರಳಿಡುತ್ತಿದ್ದಾರೆ. ಆದರೆ ರಾಹುಲ್ ಭಾರತದಲ್ಲಿ ತಾನು ಅವಿವಾಹಿತ ಎಂದು ತಿರುಗುತ್ತಿದ್ದಾರೆ. ಅಷ್ಟೇ ಅಲ್ಲದೇ ಕೆಲ ಮಹಿಳೆಯರ ಹೆಸರು ಜೊತೆ ರಾಹುಲ್ ಗಾಂಧಿ ಹೆಸರು ಕೂಡ ತಳುಕು ಹಾಕಿಕೊಂಡಿದೆಎಂಬುದನ್ನು ವರದಿಯಲ್ಲಿ ತಿಳಿಸಿದ್ದಾರೆ. ಆದರೆ ಇದೀಗ ಕೊಲಂಬಿಯಾ ಮಹಿಳೆ ಜೊತೆ ರಾಹುಲ್ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೌಂಡು ಮಾಡ್ತಿದೆ. ಅಂದಹಾಗೇ ರಾಹುಲ್ ಮದುವೆ ಬಗ್ಗೆ ಬೂಮ್ ವೈರಲ್ ಆಗಿರುವ ಫೋಟೋ ಜಾಡು ಹಿಡಿದು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಪರಿಶೀಲಿಸಿದಾಗ, ಫೋಟೋದಲ್ಲಿ ರಾಹುಲ್ ಗಾಂಧಿ ಅವರೊಂದಿಗಿರುವ ಮಹಿಳೆ ಸ್ಪ್ಯಾನಿಶ್-ಅಮೆರಿಕದ ಟೆಲಿವಿಷನ್ ಸೀರೀಸ್‌ಗಳಲ್ಲಿ ನಟಿಸುವ ನಟಿ. ಅವರ ಹೆಸರು, ನತಾಲಿಯಾ ರಮೋಸ್. ನತಾಲಿಯಾ ಸೆಪ್ಟೆಂಬರ್ 15, 2017ರಲ್ಲಿ ರಾಹುಲ್ ಗಾಂಧಿ ಅವರೊಂದಿಗಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಲಾಸ್‌ಏಂಜಲೀಸ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಇಬ್ಬರು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಬಳಿಸಿಕೊಂಡು ಸುಳ್ಳುಸುದ್ದಿ ಹರಡಲಾಗುತ್ತಿದೆ.
Comments