ನಟ ಅಕ್ಷಯ್ ಕುಮಾರ್'ನನ್ನು ವಿಲನ್ ಎಂದ ಸ್ಟಾರ್ ನಟ : ಮೋದಿ ಕಂಡರೆ ಸದಾ ಹಲ್ಲು ಮಸೆಯುವ ಯಂಗ್ ಸ್ಟಾರ್....!!!
ಪ್ರಧಾನಿ ನರೇಂದ್ರ ಮೋದಿಯವರು ಇನ್ನೊಮ್ಮೆ ಪ್ರಧಾನ ಮಂತ್ರಿಯಾಗಬೇಕೆಂದು ಕೋಟ್ಯಾಂತರ ಮಂದಿ ಹರಕೆ ಹೊತ್ತಿದ್ದಾರೆ. ಈ ನಡುವೆ ಮೋದಿ ಜೀವನ ಕುರಿತಾಗಿ ಅವರ ಬಯೋಪಿಕ್ ಚಿತ್ರವೊಂದು ತಯಾರಾಗಿದೆ. ಈಗಾಗಲೇ ಎಲ್ಲಾ ಹಂತದ ಸಿನಿಮಾ ಕೆಲಸಗಳು ಮುಗಿದಿದ್ದು ಕೇವಲ ರಿಲೀಸ್’ಗಷ್ಟೇ ಬಾಕಿಯಿದೆ. ಈ ನಡುವೆ ಪ್ರಧಾನಿ ಮಂತ್ರಿ ಮೋದಿಯವರ ರಾಜಕಿಯೇತರ ಸಂದರ್ಶನವೊಂದು ನಡೆಸಲಾಯ್ತು. ಸಂದರ್ಶನ ಮಾಡಿದವರು ನಟ ಅಕ್ಷಯ್ ಕುಮಾರ್. ಸಂದರ್ಶನದ ವೇಳೆ ಮೋದಿಯಿಂದ ಕೆಲ ಇಂಟ್ರೆಸ್ಟಿಂಗ್ ವಿಚಾರಗಳು ಕೂಡ ಬಯಲಾದವು. ನಟ ಅಕ್ಷಯ್ ಕುಮಾರ್ ಅವರ ಮೋದಿ ಸಂದರ್ಶನನಕ್ಕೆ, ವ್ಯಾಪಕ ಪ್ರಶಂಸೆ ವ್ಯಕ್ತವಾಯ್ತು. ಎಲ್ಲರ ಮೆಚ್ಚುಗೆ ಗಳಿಸಿತ್ತು ಅವರ ಇಂಟರ್ ವ್ಯೂ. ಇದರ ಮಧ್ಯದಲ್ಲಿಯೇ ತಮಿಳಿನ ಖ್ಯಾತ ನಟನಿಂದ ಅಪಸ್ವರವೊಂದು ಹೊರ ಬಿದ್ದಿದೆ. ಅಕ್ಷಯ್ ಕುಮಾರ್ ಅವರ ಸಂದರ್ಶನವನ್ನು ಟೀಕಿಸಿ ಮಾತನಾಡಿದ್ದಾರೆ ತಮಿಳಿನ ನಟ ಸಿದ್ಧಾರ್ಥ್.
ಅಂದಹಾಗೇ ಮೋದಿಯ ವಿರುದ್ಧ ಆಗಾಗ್ಗೆ ಟೀಕೆಗಳನ್ನು ಮಾಡುವ ಸಿದ್ಧಾರ್ಥ್, ನಟ ಅಕ್ಷಯ್ ಕುಮಾರ್ ಅವರನ್ನು ಕೂಡ ವಿಲನ್ ಎಂದು ಕರೆದಿದ್ದಾರೆ. ಪ್ರಧಾನಿ ಮೋದಿ ಮತ್ತು ಅಕ್ಷಯ್ ಕುಮಾರ್ ಸಂದರ್ಶನ ರಾಜಕೀಯೇತ್ತರ ಮಾತುಕತೆಯಾಗಿತ್ತು. ತಮ್ಮ ಬಾಲ್ಯ, ಶಿಕ್ಷಣ, ರಾಜಕೀಯ ನಾಯಕರ ಜತೆ ತಮ್ಮ ಸ್ನೇಹ ಹೀಗೆ ಹಲವಾರು ಸಂಗತಿಗಳನ್ನು ಅಕ್ಷಯ್ ಎದುರು ಮೋದಿ ಹಂಚಿಕೊಂಡಿದ್ದರು. ಇಡೀ ದೇಶವೇ ಮೋದಿ ಸಂದರ್ಶನ ಮಾಡಿದ ಬಗೆಗೆ ಅಕ್ಷಯ್ ಕುಮಾರ್ ಅವರನ್ನು ಮೆಚ್ಚುಗೆ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಸಿದ್ಧಾರ್ಥ್ ಮಾತ್ರ ಅಕ್ಷಯ್ ಕುಮಾರ್ ವಿರುದ್ಧ ಟೀಕಾರೋಪ ಮಾಡಿದ್ದಾರೆ.ಇದಕ್ಕೆ ಕಿಡಿಕಾರಿರುವ ಸಿದ್ಧಾರ್ಥ್ ತಮ್ಮ ಟ್ವೀಟರ್‍ನಲ್ಲಿ ನೇರವಾಗಿ ಅಕ್ಷಯ್ ಕುಮಾರ್ ಸಂದರ್ಶನ ಅತ್ಯಂತ ಕಳಪೆಯಾಗಿತ್ತು. ಅವರ ಸಂವಾದ ನಡೆಸಿದ ರೀತಿ ಸರಿ ಇರಲಿಲ್ಲ ಆಕ್ಷನ್ ಸ್ಟಾರ್ ಎಂದು ಕೊಚ್ಚಿಕೊಳ್ಳುವ ಅಕ್ಷಯ್ ಕುಮಾರ್ ಮೌಲ್ಯ ಅರಿಯದ ವಿಲನ್ ಎಂದು ಟೀಕಿಸಿದ್ದಾರೆ.
Comments