ರಾಧಿಕಾ ಜೊತೆಗೆ ಉಡುಪಿ ರೆಸಾರ್ಟ್‌ನಲ್ಲಿ ಸಿಎಂ ಕುಮಾರಸ್ವಾಮಿ..!? ಪೋಟೋ ವೈರಲ್

ಸಿಎಂ ಕುಮಾರಸ್ವಾಮಿಯವರು ಇಷ್ಟು ದಿನ ಲೋಕಸಭಾ ಚುನಾವಣೆಯಲ್ಲಿ ಮಗ ನಿಖಿಲ್ ಪರ ಪ್ರಚಾರ ಮಾಡುತ್ತಾ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು.. ಆ ಸಮಯದಲ್ಲಿ ಮಾತಿಗೆ ಮಾತು ಬೆಳೆದು ಒಂದಿಷ್ಟು ಸುದ್ದಿಯಾಗಿದ್ದಂತೂ ನಿಜ… ಸದ್ಯ ಲೋಕಸಮರ ಮುಕ್ತಾಯವಾಗಿದ್ದು ಫಲಿತಾಂಶವಷ್ಟೆ ಬಾಕಿ ಇದೆ.. ಇದರ ನಡುವೆ ಕುಮಾರಸ್ವಾಮಿ ಮತ್ತೆ ಸುದ್ದಿಯಾಗಿದ್ಧಾರೆ.
ಇಷ್ಟುದಿನ ಚುನಾವಣೆ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಸದ್ಯ ಇದೀಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಇತ್ತಿಚಿಗಷ್ಟೆ ರಾಧಿಕಾ ಜೊತೆಗೆ ಉಡುಪಿಯ ಸಾಯಿರಾಧಾ ರೆಸಾರ್ಟ್‌ಗೆ ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳ ಕ್ಯಾಮೆರಾ ಕಂಡು ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ ಸಿ.ಎಂ ಯಾರು ಇವರನ್ನು ಒಳಗೆ ಬಿಟ್ಟವರು. ಸ್ವಲ್ಪಾನೂ ನಿಮಗೆ ಮ್ಯಾನರ್ಸ್ ಇಲ್ವಾ..?. ಮಿಡೀಯಾದವರಿಗೆ ಮಾಹಿತಿ ಕೊಟ್ಟೋರ್ ಯಾರು..? ಖಾಸಗಿ ಕಾರ್ಯಕ್ರಮ ಎಂದು ಗೊತ್ತಿಲ್ವಾ ನಿಮಗೆ? ಎಂದೆಲ್ಲಾ ಕಿಡಿಕಾರಿದ್ದಾರೆ.. ಈ ರೀತಿಯ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ ಕುಮಾರಸ್ವಾಮಿಯವರು ಇದೆಲ್ಲ ಸುಳ್ಳು ಎಂದು ಸ್ಪಷ್ಟ ಪಡಿಸಿದ್ದಾರೆ. ಯಾರೋ ಬೇಕಂತ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ ಎಂದು ಸ್ಪಷ್ಟ ಪಡಿಸಿದರು.
Comments